ಕುಸಿದು ಬಿದ್ದು ಪಶು ವೈದ್ಯಕೀಯ ಪರೀಕ್ಷಕ ಮೃತ್ಯು

Update: 2022-08-06 15:27 GMT

ಹೆಬ್ರಿ, ಆ.6: ಹಿರಿಯ ಪಶು ವೈದ್ಯಕೀಯ ಪರೀಕ್ಷಕರೊಬ್ಬರು ಕರ್ತವ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ಆ.5ರಂದು ಸಂಜೆ ವೇಳೆ ಶಿವಪುರ ಗ್ರಾಮದ ಸೂರಿಮಣ್ಣು ಎಂಬಲ್ಲಿ ನಡೆದಿದೆ.

ಮೃತರನ್ನು ಮುದ್ರಾಡಿ ಗ್ರಾಮದ ಕೆಲಕಿಲ ರಸ್ತೆ ನಿವಾಸಿ, ಮುದ್ರಾಡಿ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಶೇಖರ ನಾಯ್ಕ(59) ಎಂದು ಗುರುತಿಸಲಾಗಿದೆ. ಇವರು ಉದಯ ಎಂಬವರ ಮನೆಯಲ್ಲಿ ಜಾನು ವಾರಿಗೆ ಇಂಜೆಕ್ಷನ್ ನೀಡಿ ಕೈತೊಳೆದು ಹೊರಡುತ್ತಿದ್ದಾಗ ಕುಸಿದು ಬಿದ್ದರೆನ್ನ ಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಇವರು ಹೆಬ್ರಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News