×
Ad

ಆ.7: ಮುಹಮ್ಮದ್ ಫಾಝಿಲ್ ಸ್ಮರಣಾರ್ಥ ರಕ್ತದಾನ ಶಿಬಿರ

Update: 2022-08-06 22:59 IST
ಮುಹಮ್ಮದ್ ಫಾಝಿಲ್
 

ಮಂಗಳೂರು, ಆ.6: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮುಹಮ್ಮದ್ ಫಾಝಿಲ್ ಮಂಗಳಪೇಟೆ ಸ್ಮರಣಾರ್ಥ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ವತಿಯಿಂದ ಆ.7ರಂದು  ದ.ಕ. ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಸ್ವತಃ ರಕ್ತದಾನಿಯಾಗಿದ್ದ ಕೊಲೆಯಾದ ಫಾಝಿಲ್ ಅವರು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ಸಕ್ರಿಯ ಸದಸ್ಯನಾಗಿದ್ದುಕೊಂಡು ತುರ್ತು ಸಂದರ್ಭ ರಕ್ತ ಪೂರೈಕೆಯಲ್ಲಿ ಮೂಂಚೂಣಿಯಲ್ಲಿದ್ದರು. ಅವರ ಸ್ಮರಣಾರ್ಥವಾಗಿ ಸಂಸ್ಥೆಯ 6ನೇ ವಾರ್ಷಿಕೋತ್ಸವದ ಪ್ರಯುಕ್ತ ಉಳ್ಳಾಲ, ಉಳಾಯಿಬೆಟ್ಟು, ಪುತ್ತೂರು, ಅಮ್ಮುಂಜೆಯಲ್ಲಿ ಆ.7ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಸಲಹೆಗಾರ ಮುಸ್ತಫಾ ದೆಮ್ಮಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News