ಆ.8ರಿಂದ ದ.ಕ.ಜಿಲ್ಲೆಯಲ್ಲಿ ರಾತ್ರಿ ನಿರ್ಬಂಧ ತೆರವು: ಡಿಸಿ ಡಾ.ರಾಜೇಂದ್ರ

Update: 2022-08-07 17:03 GMT
ಡಾ.ರಾಜೇಂದ್ರ

ಮಂಗಳೂರು, ಆ.7: ದ.ಕ.ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಮತ್ತು ಹಿಂಸಾಚಾರ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ದ.ಕ. ಜಿಲ್ಲಾಡಳಿತವು ಜಾರಿಗೊಳಿಸಿದ್ದ ರಾತ್ರಿ ನಿರ್ಬಂಧವನ್ನು ಆ.8ರಿಂದ ತೆರವುಗೊಳಿಸಲಾಗುವುದು. ಆದರೆ ಈಗಾಗಲೆ ಜಾರಿಗೊಳಿಸಲಾದ ಸೆ.144 ರ ಅನ್ವಯ ನಿಷೇಧಾಜ್ಞೆಯನ್ನು ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯಲ್ಲಿ ಆ.14ರ ಮಧ್ಯರಾತ್ರಿಯವರೆಗೆ ಮುಂದುವರಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಜಿಲ್ಲೆಯ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಸುಧಾರಣೆಯನ್ನು ಗಮನಿಸಿ ಸೆಕ್ಷನ್ 144 ಹೊರತುಪಡಿಸಿ ಇತರ ಎಲ್ಲಾ ನಿರ್ಬಂಧ ಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಮದ್ಯದ ಅಂಗಡಿಗಳ ಸಹಿತ ಎಲ್ಲಾ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಬಹುದಾಗಿದೆ.

ಸೆಕ್ಷನ್  144ರ ನಿಷೇಧಾಜ್ಞೆಯ ಅನ್ವಯ ಆ.14ರ ಮಧ್ಯರಾತ್ರಿಯವರೆಗೆ 5 ಮಂದಿಗಿಂತ ಹೆಚ್ಚು ಜನರ ಓಡಾಟ ಮತ್ತು ಇತರ ಪ್ರದರ್ಶನ ಶಸ್ತ್ರಾಸ್ತ್ರಗಳ ಸಾಗಾಟ ನಿಷೇಧ ಮುಂದುವರಿಯುತ್ತದೆ ಎಂದು ಡಿಸಿ ತಿಳಿಸಿದ್ದಾರೆ.

ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲೂ ತೆರವು

ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಯ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ರಾತ್ರಿ ನಿರ್ಬಂಧವನ್ನು ಆ.8ರಿಂದ ತೆರವುಗೊಳಿಸಲಾಗಿದೆ. ಆದರೆ ಸೆ.144ರ ಅನ್ವಯ ನಿಷೇಧಾಜ್ಞೆಯನ್ನು ಆ.14ರ ಮಧ್ಯರಾತ್ರಿಯವರೆಗೆ ಮುಂದುವರಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News