ಈ ವಾರ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ, ದೇವೇಂದ್ರ ಫಡ್ನವಿಸ್ ಗೆ ಗೃಹ ಸಚಿವ ಸ್ಥಾನ?

Update: 2022-08-08 05:40 GMT
Photo:PTI

ಮುಂಬೈ: ಮಹಾರಾಷ್ಟ್ರದಲ್ಲಿ ಈ ವಾರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಸಚಿವರ ಸೇರ್ಪಡೆ ಕುರಿತ ಪ್ರಶ್ನೆಗಳಿಗೆ ಉತ್ತರವಾಗಿ ದಿಲ್ಲಿಯಲ್ಲಿ ಸುದ್ದಿಗಾರರಿಗೆ ಉತ್ತರಿಸಿದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು "ನೀವು ಊಹಿಸುವ ಮೊದಲೇ" ಮಹಾರಾಷ್ಟ್ರ ಸಂಪುಟದ ವಿಸ್ತರಣೆ ನಡೆಯಲಿದೆ ಎಂದರು.

ಫಡ್ನವೀಸ್ ಅವರು ಗೃಹ ಖಾತೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ, ಜೂನ್ 30 ರಿಂದ ಇಬ್ಬರು ಸದಸ್ಯರ ಕ್ಯಾಬಿನೆಟ್‌ನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಮಾರ್ಗವನ್ನು ತೆರವುಗೊಳಿಸಲಾಗಿದೆ.

ಫಡ್ನವೀಸ್ ಹಾಗೂ  ಮುಖ್ಯಮಂತ್ರಿ ಏಕನಾಥ್ ಶಿಂಧೆ ಇಬ್ಬರೂ ವಾರಾಂತ್ಯದಲ್ಲಿ ದಿಲ್ಲಿಯಲ್ಲಿದ್ದರು, ಶಿಂಧೆ NITI ಆಯೋದ ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News