ಮಂಗಳೂರು : ಐವನ್ ಡಿಸೋಜಾ ನೇತೃತ್ವದಲ್ಲಿ ಸಿದ್ದರಾಮಯ್ಯರ ಅಮೃತ ಮಹೋತ್ಸವ ಆಚರಣೆ

Update: 2022-08-08 09:29 GMT

ಮಂಗಳೂರು : ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದ ಸಂಭ್ರಮ ಕಾರ್ಯಕ್ರಮ ವನ್ನು ಮಾಜಿ ವಿಧಾನ ಪರಿಷತ್ ಶಾಸಕರು, ಕೆಪಿಸಿಸಿ ಉಪಾಧ್ಯಕ್ಷರಾದ ಐವನ್ ಡಿಸೋಜಾ ತಮ್ಮ ಸ್ವಗೃಹದಲ್ಲಿ ಆಯೋಜಿಸಿದರು.

ಮುಖ್ಯ ಅತಿಥಿಯಾಗಿ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಮಾತನಾಡಿದರು. ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ರವರ ಅಮೃತ ಮಹೋತ್ಸವ ಕಾರ್ಯಕ್ರಮ ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಸಿದ್ದರಾಮಯ್ಯ ರವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ನೀಡಿರುವ ಜನಪರ ಕಾರ್ಯಕ್ರಮಗಳು, ಸಮಾಜದ ಎಲ್ಲಾ ವರ್ಗದ ಜನರಿಗೂ ಅವರು ನೀಡಿರುವ ಯೋಜನೆಗಳು ಜನರ ಮನಸ್ಸಲ್ಲಿ ಅವರಿಗೆ ಶಾಶ್ವತ ಸ್ಥಾನ ನೀಡಿದೆ. ಶೋಷಿತರ ಹಾಗೂ ಕೆಳ ವರ್ಗದ ಜನರ ಪರವಾಗಿ ಧ್ವನಿ ಎತ್ತುವ ಅಪೂರ್ವ ನಾಯಕ ಸಿದ್ದರಾಮಯ್ಯ ರವರು.‌ ದಾವಣಗೆರೆಯ ಅಮೃತ ಮಹೋತ್ಸವ ಕಾರ್ಯಕ್ರಮವೇ ಸಿದ್ದರಾಮಯ್ಯ ರವರ ಜನಪ್ರಿಯತೆಗೆ ಹಾಗೂ ಅವರ ಯಶಸ್ವಿ ನಾಯಕತ್ವಕ್ಕೆ ಸಾಕ್ಷಿ ಎಂದು ಯು.ಟಿ. ಖಾದರ್ ಹೇಳಿದರು.

ಐವನ್ ಡಿಸೋಜಾ ಮಾತನಾಡಿ, ಸಿದ್ದರಾಮಯ್ಯ ರವರು ರಾಜ್ಯಕಂಡ ಅಪರೂಪದ ಜನ ನಾಯಕ, ಸಾಮಾಜಿಕ ನ್ಯಾಯ ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಸಿದ್ದರಾಮಯ್ಯ ರವರ ಕೊಡುಗೆ ಅಪಾರ‌. ಮುಂದಿನ ದಿನಗಳಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಆಚರಿಸಬೇಕು. ಆ ನಿಟ್ಟಿನಲ್ಲಿ ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ಸಿದ್ದರಾಮಯ್ಯ ರವರು ರಾಜ್ಯಕ್ಕೆ ನೀಡಿರುವ ಜನಪರ ಯೋಜನೆಗಳ ಬಗ್ಗೆ ಕೊಡುಗೆಗಳ‌ ಬಗ್ಗೆ ಜನರ ಮುಂದಿಡಲಿದ್ದೇವೆ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಪಿವಿ ಮೋಹನ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ಅಬ್ದುಲ್ ರವೂಫ್, ನವೀನ್ ಡಿಸೋಜಾ, ಕೇಶವ ಮರೋಳಿ, ಶಂಶುದ್ದೀನ್, ಝೀನತ್ ಬಂದರ್, ಜೆಸಿಂತಾ ವಿಲ್ಫ್ರೆಡ್, ಲ್ಯಾನ್ಸಿ ಎಲ್ ಪಿಂಟೋ, ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ ಕಾಂಗ್ರೆಸ್ ಮುಖಂಡರುಗಳಾದ ಕಲ್ಲಿಗೆ ತಾರಾನಾಥ ಶೆಟ್ಟಿ, ಎಂ.ಜಿ. ಹೆಗ್ಡೆ, ವಿಶ್ವಾಸ್ ದಾಸ್, ಕೆ. ಅಶ್ರಫ್, ನಾಗೇಂದ್ರ ಕುಮಾರ್, ಸಬಿತಾ ಮಿಸ್ಕಿತ್, ಅಪ್ಪಿ, ಪವಿತ್ರ ಕರ್ಕೇರ, ಭಾಸ್ಕರ್ ರಾವ್, ಕವಿತಾ ಡಿ. ರಾವ್, ಶಾಂತಲಾ ಗಟ್ಟಿ, ಮಂಜುಳಾ ನಾಯಕ್, ಶೋಭಾ ಕೇಶವ, ಯೋಗಿಶ್ ನಾಯಕ್, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಹಬೀಬುಲ್ಲ ಕಣ್ಣೂರು, ಪುನೀತ್ ಶೆಟ್ಟಿ, ಅಶ್ರಫ್ ಅಪ್ಪು, ದಿನೇಶ್ ರಾವ್, ನಾಸೀರ್ ಬಂದರ್, ಹೈದರ್ ಜೆಪ್ಪು, ಜಯರಾಜ್ ಕೋಟ್ಯಾನ್, ಸದಾಶಿವ ಅಮೀನ್, ಹುಸೇನ್ ಬೋಳಾರ್, ರಾಕೇಶ್ ಶೆಟ್ಟಿ, ವಿವೇಕ್ ರಾಜ್ ಪೂಜಾರಿ, ನೀರಜ್ ಪಾಲ್, ಮನೀಶ್ ಬೋಳಾರ್, ವಿಲ್ಫ್ರೆಡ್ ಡಿಸೋಜಾ, ಸಿಎಂ ಮುಸ್ತಫಾ, ಎಂಜೆ. ನಾಗೇಶ್, ಸಲೀಂ ಮಕ್ಕ, ನಿತ್ಯಾನಂದ ಶೆಟ್ಟಿ, ನಝೀರ್ ಬಜಾಲ್, ಆಲಿಸ್ಟರ್ ಡಿಕುನ್ಹಾ, ಮಹೇಶ್ ಕೋಡಿಕಲ್, ರಮಾನಂದ ಪೂಜಾರಿ, ಇಸ್ಮಾಯಿಲ್ ಬಿ.ಎಸ್., ದೀಕ್ಷಿತ್ ಅತ್ತಾವರ, ಫಯಾಝ್ ಅಮ್ಮೆಮ್ಮಾರ್, ಮಿಲಾಝ್ ಅತ್ತಾವರ, ಸೌಹಾನ್ ಎಸ್‌ಕೆ, ಪಿಯೂಸ್ ಮೋಂತೆರೊ, ವಸಂತ ವೀರನಗರ, ಅಭಿಲಾಷ್, ಉಮರಬ್ಬ ಕಣ್ಣೂರು, ರಫೀಕ್ ಇಕೆ, ನಾರಾಯಣ ಬೋಳಾರ್, ವಿಕಾಸ್ ಶೆಟ್ಟಿ, ಐ ಮೋನು, ಅನಿಲ್ ಥೋರಸ್, ಆರಿಫ್ ಬಂದರ್, ಸಿರಾಜ್ ಬಜ್ಪೆ, ನಜೀಬ್ ಮಂಚಿ, ಅಬ್ದುಲ್ ಮುಹೈಮಿನ್, ಜೇಮ್ಸ್ ಪ್ರವೀಣ್, ಸತೀಶ್ ಪೆಂಗಲ್, ಮೀನಾ ಟೆಲ್ಲಿಸ್ ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News