ತ್ರಿವಳಿ ಕೊಲೆ ಪ್ರಕರಣ:ಉತ್ತರ ಪ್ರದೇಶದ ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ

Update: 2022-08-08 17:15 GMT

ಜೌನುಪುರ(ಉ.ಪ್ರ),ಆ.8: ಇಲ್ಲಿಯ ನ್ಯಾಯಾಲಯವು 27 ವರ್ಷಗಳಷ್ಟು ಹಳೆಯ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಛ್ಲಿಶಹರದ ಮಾಜಿ ಸಂಸದ ಉಮಾಕಾಂತ ಯಾದವ್ ಗೆ ಸೋಮವಾರ ಜೀವಾವಧಿ ಶಿಕ್ಷೆ ಮತ್ತು ಐದು ಲ.ರೂ.ದಂಡವನ್ನು ವಿಧಿಸಿದೆ. ಪ್ರಕರಣದಲ್ಲಿಯ ಇತರ ಏಳು ಆರೋಪಿಗಳಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

1995ರ ಫೆಬ್ರವರಿಯಲ್ಲಿ ಜೌನುಪುರದ ಶಾಹಗಂಜ್ ಸರಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಠಾಣೆಯ ಲಾಕಪ್ನಲ್ಲಿ ಕೂಡಿ ಹಾಕಲಾಗಿದ್ದ ರಾಜಕುಮಾರ ಯಾದವ್ ನನ್ನು ರಕ್ಷಿಸುವ ಪ್ರಯತ್ನದಲ್ಲಿ ಕಾನ್‌ಸ್ಟೇಬಲ್ ಗಳಾದ ಅಜಯ್ ಸಿಂಗ್ ಮತ್ತು ಲಲ್ಲನ್ ಸಿಂಗ್ ಹಾಗೂ ಇನ್ನೋರ್ವ ವ್ಯಕ್ತಿ ಗುಂಡಿನ ದಾಳಿಗೆ ಬಲಿಯಾಗಿದ್ದರು.
ಘಟನೆಯ ವಿವರಗಳನ್ನು ನೀಡಿದ ಸರಕಾರಿ ವಕೀಲರು, 1995ರ ಫೆಬ್ರವರಿಯಲ್ಲಿ ಉಮಾಕಾಂತ ಯಾದವ ತನ್ನ ಸಹಚರರೊಂದಿಗೆ ರೈಫಲ್ ಮತ್ತು ಪಿಸ್ತೂಲುಗಳೊಂದಿಗೆ ಸಜ್ಜಿತರಾಗಿ ಬಂದಿದ್ದರು. ಯಾದವ್ ಲಾಕಪ್ನಲ್ಲಿದ್ದ ರಾಜಕುಮಾರ್ ಯಾದವನನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದರು. ಅವರು ಗುಂಡು ಹಾರಿಸಿದಾಗ ಇಬ್ಬರು ಕಾನ್ ಸ್ಟೇಬಲ್ ಗಳು ಸೇರಿದಂತೆ ಮೂವರು ಮೃತಪಟ್ಟಿದ್ದರು ಎಂದು ಜಿಆರ್ಪಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನಸ್ಟೇಬಲ್ ರಘುನಾಥ ಸಿಂಗ್ ದೂರು ದಾಖಲಿಸಿದ್ದರು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News