ಜನರ ಅವಶ್ಯಕತೆಗಳಿಗೆ ಸ್ಪಂದಿಸುವ ಜವಾಬ್ದಾರಿ ಪಂಚಾಯತ್ ಕರ್ತವ್ಯ; ಇನ್ನಾದಲ್ಲಿ ವಿವಿಧ ಇಲಾಖೆಗಳ ವಿಶೇಷ ಅಭಿಯಾನ

Update: 2022-08-08 17:34 GMT

ಪಡುಬಿದ್ರಿ: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನಾ ಗ್ರಾಮ ಪಂಚಾಯಿತಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸೋಮವಾರ ನಡೆಸಿದ ವಿಶೇಷ ಅಭಿಯಾನ ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಯಿತು. 

ಇನ್ನಾ ಗ್ರಾಮ ಪಂಚಾಯತ್, ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನಾ, ಗ್ರಾಮ ಲೆಕ್ಕಿಗರ ಕಛೇರಿ ಇನ್ನಾ, ಕಾರ್ಮಿಕ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ಸೋಮವಾರ ಇನ್ನಾ ಗ್ರಾಮ ಪಂಚಾಯತ್ ದಿ ಗೋಪಾಲ ಭಂಡಾರಿ  ಸಭಾಭವನದಲ್ಲಿ ವಿಶೇಷ ಅಭಿಯಾನ ನಡೆಯಿತು.

ಅಭಿಯಾನದಲ್ಲಿ ಆಧಾರ್ ಕಾರ್ಡು ನೊಂದಣಿ ಮತ್ತು ಪರಿಷ್ಕರಣೆ ಆಯುಷ್ಮಾನ್ ಕಾರ್ಡು, ಆಬಾ ಕಾರ್ಡು, ಈ ಶ್ರಮಿಕ್ ಕಾರ್ಡು, ಕಾರ್ಮಿಕ ಕಾರ್ಡು ನೊಂದಣಿ ಹಾಗೂ ನವೀಕರಣ, ಬಾಪೂಜಿ  ಸೇವಾ ಕೇಂದ್ರ ಪಿಂಚಣಿಗಳ  ಅರ್ಜಿ ಸ್ವೀಕಾರ ಮತ್ತು ಪಿಂಚಣಿಗಳ ವೇತನ ಪರಿಷ್ಕರಣೆ ಅವಕಾಶ ನೀಡಲಾಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇನ್ನಾ ಗ್ರಾಮ ಪಂಚಾಯತ್ ಅಧ್ಯಕ ಕುಶ ಆರ್ ಮೂಲ್ಯ, ಗ್ರಾಮೀಣ ಪ್ರದೇಶದಲ್ಲಿ ನಾಗರೀಕರಿಗೆ ಸರಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವುದು. ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸವಲತ್ತುಗಳು ಮತ್ತು ಜನರ ಅವಶ್ಯಕತೆಗಳಿಗೆ  ಸ್ಪಂದಿಸುವ ಜವಾಬ್ದಾರಿ ಸ್ಥಳೀಯ ಗ್ರಾಮ ಪಂಚಾಯತ್ ಆದ್ಯ ಕರ್ತವ್ಯ. ಪ್ರತಿ ವರ್ಷ ಇನ್ನಾ ಗ್ರಾಮ ಪಂಚಾಯಿತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು. 

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಿತಾ ಶೆಟ್ಟಿ, ಇನ್ನಾ ಅಂಚೆ ಇಲಾಖೆಯ ಅಂಚೆ ಮಾಸ್ತರ್ ಸತೀಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ದೀಪಕ್‍ ಕೋಟ್ಯಾನ್, ಶರ್ಮಿಳಾ, ಚಂದ್ರಹಾಸ ಶೆಟ್ಟಿ, ಸಮೀಕ್ಷಾ ಶೆಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗುರುದತ್, ಗ್ರಾಮಕರಣಿಕ ಹನುಮಂತ, ಗ್ರಾಮ -1  ನಿರ್ವಾಹಕರು ಶರತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಂಪ್ಯೂಟರ್ ನಿರ್ವಾಹಕಿ ಶ್ರುತಿ , ಅಂಗನವಾಡಿ ಕಾರ್ಯಕರ್ತೆ ಪುಷ್ಪಾ, ರೇಖಾ, ಆಶಾಕಾರ್ಯಕರ್ತೆ ಮಲ್ಲಿಕಾ, ಗೀತಾ, ಗ್ರಾಮಸ್ಥರಾದ ಜಯಕೋಟ್ಯಾನ್,  ಅಮರನಾಥ ಶೆಟ್ಟಿ , ಶ್ರೀಧರ ಶಟ್ಟಿ ಉಕ್ಕುಡ, ಪ್ರಸಾದ್‍ ಕುಂದರ್, ಸುಖೇತ್ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News