ಬೆಂಗಳೂರು; ಕಳವು ಪ್ರಕರಣ ಸಂಬಂಧ ಕೇಂದ್ರ ವಿಭಾಗ ಪೊಲೀಸರ ಕಾರ್ಯಾಚರಣೆ: 24 ಮಂದಿ ಸೆರೆ

Update: 2022-08-09 15:36 GMT

ಬೆಂಗಳೂರು, ಆ.9: ಕಳವು ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿರುವ ಕೇಂದ್ರ ವಿಭಾಗದ ಪೊಲೀಸರು 24 ಮಂದಿ ಆರೋಪಿಗಳನ್ನು ಬಂಧಿಸಿ 1 ಕೋಟಿ 32 ಲಕ್ಷ 39 ಸಾವಿರ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಬಂಧಿತ 24 ಆರೋಪಿಗಳಿಂದ 30 ಪ್ರಕರಣಗಳನ್ನು ಪತ್ತೆ ಮಾಡಿ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದರು. 

ಬಂಧಿತರಿಂದ 2.80 ಲಕ್ಷ ಮೌಲ್ಯದ 74 ಮೊಬೈಲ್‍ಗಳು, 13.50 ಲಕ್ಷ ಮೌಲ್ಯದ 27 ದ್ಚಿಚಕ್ರ ವಾಹನಗಳು, 17.30 ಲಕ್ಷ ಮೌಲ್ಯದ 340 ಗ್ರಾಂ ಚಿನ್ನ, 45 ಲಕ್ಷ ರೂ. ಮೌಲ್ಯದ ಕಾರುಗಳು, 34.90 ಲಕ್ಷ ರೂ. ಮೌಲ್ಯದ 58 ಕೆಜಿ ಬೆಳ್ಳಿ, 6.39 ಲಕ್ಷ ನಗದು, 7.50 ಲಕ್ಷ ಜಪ್ತಿ ಮಾಡಿದ ಹಣ ಸೇರಿ 1 ಕೋಟಿ 32 ಲಕ್ಷ 39 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಶ್ರೀನಿವಾಸ್‍ಗೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News