ಆ. 12: ಫಾದರ್ ಮುಲ್ಲರ್ಸ್ ಸಂಸ್ಥೆಯಿಂದ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ

Update: 2022-08-10 10:06 GMT

ಮಂಗಳೂರು : ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಕೇಂದ್ರಿಯ ಗ್ರಂಥಾಲಯ ಸಮಿತಿಯಿಂದ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಆ. 12ರಂದು ದೇಶಾದ್ಯಂತ ಗ್ರಂಥಾಲಯ ಪಿತಾಮಹ ಎಂದು ಖ್ಯಾತಿ ಪಡೆದಿರುವ ಪದ್ಮಶ್ರೀ ದಿ. ಎಸ್.ಆರ್. ರಂಗನಾಥನ್‍ರವರ ಜನ್ಮ ದಿನವನ್ನು ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು ಸಂಸ್ಥೆಯ ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ ಅಂತರ ವೈದ್ಯಕೀಯ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿಗಳಿಗೆ  ರಸ ಪ್ರಶ್ನೆ  (ಕ್ವಿಝ್)  "ಮುಲ್ಲರ್ ಲಿಬರ್" - 2022ನ್ನು  ಏರ್ಪಡಿಸಲಾಗಿದೆ.

ಡಾ.‌ ಹಿಮಾ ಉರ್ಮಿಳ ಶೆಟ್ಟಿ, ಅಧ್ಯಕ್ಷರು, ಡಾ. ಎಂ. ವಿ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ರವರು ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದು, ವಂ. ಫಾ. ರಿಚರ್ಡ್ ಕುವೆಲ್ಲೋ  ನಿರ್ದೇಶಕರು ಫಾದರ್ ಮುಲ್ಲರ್  ಚಾರಿಟೇಬಲ್ ಸಂಸ್ಥೆಯವರು  ಅಧ್ಯಕ್ಷತೆ  ವಹಿಸುವರು. ಕಾಲೇಜಿನ  ಆಡಳಿತಾಧಿಕಾರಿ ವಂ. ಫಾ. ಅಜಿತ್ ಮಿನೇಜಸ್, ಡೀನ್ ಡಾ. ಆಂಟೊನಿ ಸಿಲ್ವನ್ ಡಿಸೋಜ, ಆಡಳಿತ ಮಂಡಳಿ ಸದಸ್ಯರು, ಕೇಂದ್ರೀಯ ಗ್ರಂಥಾಲಯ ಸಮಿತಿಯ ಅಧ್ಯಕ್ಷ ಡಾ. ಬಿ. ಎಂ. ವೆಂಕಟೇಶ, ಗ್ರಂಥಪಾಲಕರಾದ ಡಾ. ಜೆನೆಟ್ ಲೋಬೋ ಹಾಗೂ ಬೋಧನಾ ಸಿಬ್ಬಂದಿ ಉಪಸ್ಥಿತರಿರುವರು.
 
ಈ ಸಂಧರ್ಭದಲ್ಲಿ ಹೆಚ್ಚು ಗ್ರಂಥಾಲಯ ಉಪಯೋಗಿಸಿದ, ವಿಶ್ವವಿದ್ಯಾಲಯದ ರ‍್ಯಾಂಕ್ ಪಡೆದ, ಬಿ.ಎಂ.ಜೆ. ರೀಸರ್ಚ್ ಪಬ್ಲಿಕೇಶನ್ ಮಾಡಿದವರನ್ನೂ ಗುರುತಿಸಿ ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News