ದುಡಿಯುವ ವರ್ಗದ ಮಹಿಳೆಯರಿಗೆ ಬಿಡುವೆಷ್ಟಿದೆ?

Update: 2022-08-12 06:14 GMT

20ರ ಹರೆಯದ ಯುವಜನರು ನಮ್ಮ ದೇಶದ ಬೆನ್ನೆಲುಬಾಗಿದ್ದಾರೆ. ಈ ವಯೋಮಾನದವರಲ್ಲಿ ಕೆಲವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರಾದರೆ ಇನ್ನು ಕೆಲವರು ತಮ್ಮ ವೃತ್ತಿಜೀವನದ ಆರಂಭದಲ್ಲಿರುತ್ತಾರೆ. ಅವರಲ್ಲಿ ಹಲವರು ವಿವಾಹಿತರಾಗಿರುತ್ತಾರೆ ಮತ್ತು ತಮ್ಮ ಕುಟುಂಬದ ಪೋಷಣೆಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುತ್ತಾರೆ. ಭಾರತೀಯರ ಸರಾಸರಿ ವಯಸ್ಸು 29 ವರ್ಷ ಆಗಿದ್ದು, ಜಗತ್ತಿನಲ್ಲೇ ಕಿರಿಯ ವಯಸ್ಸಿನವರ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ.

20ರ ಹರೆಯದವರು ಹಲವು ವರ್ಷಗಳ ಕಾಲ ದುಡಿಯುವವರಾಗಿರುತ್ತಾರೆ ಹಾಗೂ ದೇಶದ ಆರ್ಥಿಕತೆಯ ವಿಸ್ತರಣೆಗೆ ಅಪಾರವಾದ ಕೊಡುಗೆಯನ್ನು ನೀಡುತ್ತಾರೆ. ಭಾರತೀಯ ಬಹುತೇಕ ಯುವಜನರು ಹಾಗೂ ಮಹಿಳೆಯರು ತಮ್ಮ ಸಮಯವನ್ನು ಹೇಗೆ ಕಳೆಯುತ್ತಾರೆಂಬುದನ್ನು ಅರಿತಾಗ ನಮಗೆ ಸಮಾಜದ ಕಾರ್ಯನಿರ್ವಹಣೆಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ.

ಸಮಯ ಹಾಗೂ ದುಡಿಯುವ ಯುವಜನರು

ಭಾರತೀಯರ ಸಮಯದ ಬಳಕೆಗೆ ಸಂಬಂಧಿಸಿ 2019-20ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಭಾರತದ ಉದ್ಯೋಗಸ್ಥ ಯುವಜನರು ಕೆಲಸದಲ್ಲಿ ಹಾಗೂ ಬಿಡುವಿನ ಅವಧಿಯಲ್ಲಿ ಕಳೆಯುವ ಸರಾಸರಿ ಸಮಯದ ಬಗ್ಗೆ ಹುಡುಕಾಟ ನಡೆಸಿದಾಗ ಈ ಮಾದರಿಯು ಪುರುಷರು ಹಾಗೂ ಮಹಿಳೆಯರಲ್ಲಿ ಪರಸ್ಪರ ಭಿನ್ನವಾಗಿದೆ. ಈ ಸಮೀಕ್ಷೆಯ ಪ್ರಕಾರ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕ್ರಮವಾಗಿ ಶೇ.78 ಹಾಗೂ ಶೇ.70ರಷ್ಟು ಯುವಜನರು ಹಣ ಪಾವತಿಸಲ್ಪಡುವ ಕೆಲಸ (ಜಿ ಡಿಟ್ಟ  )ದಲ್ಲಿ ತೊಡಗಿಸಿಕೊಂಡಿದ್ದಾರೆ. ಯುವತಿಯರಲ್ಲಿ ಈ ಪ್ರಮಾಣವು ಕ್ರಮವಾಗಿ ಶೇ.16 ಹಾಗೂ ಶೇ.17 ಆಗಿದೆ. ವರ್ಷದಲ್ಲಿ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಯಲ್ಲಿ ಪ್ರಮುಖ ಅವಧಿಯಲ್ಲಿ ಹಣಪಾವತಿಸಲ್ಪಡುವ ಕೆಲಸದಲ್ಲಿ ತೊಡಗಿರುವ ವ್ಯಕ್ತಿಯನ್ನು ಉದ್ಯೋಗಿಯೆಂದು ಈ ಸಮೀಕ್ಷೆಯು ವರ್ಗೀಕರಿಸಿದೆ. ಆದರೆ ಆತ ಎಷ್ಟು ತಾಸುಗಳ ಕಾಲ ದುಡಿದಿದ್ದಾನೆಂಬುದನ್ನು ಅದು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

ಸರಾಸರಿಯಾಗಿ, ಭಾರತದ ನಗರ ಪ್ರದೇಶಗಳಲ್ಲಿರುವ ಯುವಜನರು ದಿನಕ್ಕೆ 8.5 ತಾಸುಗಳವರೆಗೆ ದುಡಿಯುತ್ತಾರೆ. ಇನ್ನು ಗ್ರಾಮೀಣ ಪ್ರದೇಶಗಳ ಯುವಜನರು ಸರಾಸರಿ 7 ತಾಸುಗಳ ಕಾಲ ದುಡಿಯುತ್ತಾರೆ. ಉದ್ಯೋಗಸ್ಥ ಯುವತಿಯರು ನಗರಪ್ರದೇಶಗಳಲ್ಲಿ ಸರಾಸರಿ 6.5 ತಾಸುಗಳ ಕಾಲ ದುಡಿಯುತ್ತಾರಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಸರಾಸರಿ 4.45 ತಾಸುಗಳ ಕಾಲ ಹಣ ಪಾವತಿಸಲ್ಪಡುವ ಕೆಲಸದಲ್ಲಿ ತೊಡಗಿರುತ್ತಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಅರೆಕಾಲಿಕ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ.
ಪುರುಷರಿಗೆ ಹೋಲಿಸಿದರೆ, ಹಣದ ಪ್ರತಿಫಲ ಬರುವ ಉದ್ಯೋಗಗಳಲ್ಲಿ ಮಹಿಳೆಯರು ದುಡಿಯುವ ಸಮಯ ಕಡಿಮೆಯಾಗಿರುತ್ತದೆ. ಅವರು ಹೆಚ್ಚಿನ ಸಮಯ ಮನೆಯ ಕೆಲಸಗಳಲ್ಲಿ ಹಾಗೂ ಮಕ್ಕಳ ಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಗ್ರಾಮೀಣ ಭಾರತದಲ್ಲಿ ಅವಿವಾಹಿತ ಉದ್ಯೋಗಸ್ಥ ಯುವ ಮಹಿಳೆಯರು ಸುಮಾರು 1.5 ತಾಸುಗಳನ್ನು ಇಂತಹ ಕೆಲಸಕ್ಕೆ ಮೀಸಲಿಡುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ ಅವಿವಾಹಿತ ಉದ್ಯೋಗಸ್ಥ ಪುರುಷನು ಸುಮಾರು 25 ನಿಮಿಷಗಳನ್ನು ಕಳೆದರೆ, ಹಣಪಾವತಿಸಲ್ಪಡುವ ಉದ್ಯೋಗದಲ್ಲಿರುವ ವಿವಾಹಿತ ಪುರುಷನು ಸರಾಸರಿ ಸುಮಾರು 47 ನಿಮಿಷಗಳನ್ನು ಮನೆಗೆಲಸದಲ್ಲಿ ಕಳೆಯುತ್ತಾನೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಪುರುಷ ದೈನಂದಿನ ಸಮಯ ಬಳಕೆಯ ನಮೂನೆಯಲ್ಲಿ ವಿವಾಹವು ಹೆಚ್ಚೇನೂ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಆದರೆ ಅದು ಮಹಿಳೆಯರ ವಿಷಯದಲ್ಲಿ ಹಾಗಾಗುತ್ತದೆ ಮತ್ತು ಈ ಬದಲಾವಣೆಯು ಅತ್ಯಂತ ಗಣನೀಯವಾಗಿರುತ್ತದೆ.

ಉದ್ಯೋಗದ ಸ್ಥಿತಿಗತಿ ಏನೇ ಇರಲಿ ಅವರು ಸಾಮುದಾಯಿಕ ಹಾಗೂ ಸಾಮಾಜಿಕ ಸೇವೆಗಳಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಳ್ಳುವ ಸಾಧ್ಯತೆಗಳು ಅದೇ ವಯೋಮಾನದ ಯುವತಿಯರಿಗಿಂತ ಅಧಿಕವಾಗಿರುತ್ತವೆ. ನಗರ ಪ್ರದೇಶಗಳಿಗಿಂತ ಅಧಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ವ್ಯತ್ಯಾಸ ಹೆಚ್ಚು ಎದ್ದು ಕಾಣುತ್ತದೆ. ಮಹಿಳೆಯರು ಎದುರಿಸುತ್ತಿರುವ ಲಿಂಗಭೇದಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ಮಾನದಂಡಗಳು ಇಂತಹ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ಸಕ್ರಿಯಾತ್ಮಕತೆಯನ್ನು ನಿರ್ಬಂಧಿಸುತ್ತದೆ.

ಬಿಡುವಿನ ಸಮಯದಲ್ಲಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳ ಮಹಿಳೆಯರನ್ನು ಹೊರತುಪಡಿಸಿದರೆ ಪ್ರತೀ ದಿನ ಎಲ್ಲಾ ಉದ್ಯೋಗಸ್ಥ ವಯಸ್ಕರು ಸರಾಸರಿ 1 ತಾಸು 45 ನಿಮಿಷಗಳನ್ನು ಕಳೆಯುತ್ತಾರೆ. ಗ್ರಾಮೀಣ ಮಹಿಳೆಯರು ಸರಾಸರಿ ಬಿಡುವಿನ ಚಟುವಟಿಕೆಗಳಿಗಾಗಿ ವ್ಯಯಿಸುವ ಸಮಯ 1 ತಾಸು 20 ನಿಮಿಷ ಆಗಿದ್ದು, ಈ ವ್ಯತ್ಯಾಸವು ಅವರು ಮನೆಗೆಲಸಕ್ಕೆ ತೆಗೆದುಕೊಳ್ಳುವ ಸಮಯವನ್ನು ಪ್ರತಿಫಲಿಸುತ್ತದೆ. ಇತರ ಎಲ್ಲಾ ಗುಂಪುಗಳಿಗೆ ಹೋಲಿಸಿದರೆ ಹಣ ಪಾವತಿಸಲ್ಪಡುವ ಕೆಲಸದಲ್ಲಿ ದುಡಿಯುವ ಯುವತಿಯು ತನ್ನ ಬಿಡುವಿನ ಅವಧಿಯ ಚಟುವಟಿಕೆಗಳಿಗೆ ಕಳೆಯುವ ಸಮಯ ಅತ್ಯಂತ ಕನಿಷ್ಠವಾಗಿದೆ.

ಯುವಜನರು ಬಿಡುವಿನ ಕಾಲದಲ್ಲಿ ಬಹುತೇಕ ಅವಧಿಯನ್ನು ಸಾಮೂಹಿಕ ಮಾಧ್ಯಮಗಳ ವೀಕ್ಷಣೆಯಲ್ಲಿ ಕಳೆಯುತ್ತಾರೆ. ನಗರ ಪ್ರದೇಶಗಳಲ್ಲಿ ಉದ್ಯೋಗಸ್ಥ ಯುವಜನರು, ಸರಾಸರಿ 1 ತಾಸು 10 ನಿಮಿಷಗಳನ್ನು ಸಾಮೂಹಿಕ ಮಾಧ್ಯಮಗಳಲ್ಲಿ ಕಳೆಯುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಬಿಡುವಿನ ವೇಳೆ ಸಾಮೂಹಿಕ ಮಾಧ್ಯಮಗಳಲ್ಲಿ ಕಾಲ ಕಳೆಯುವ ಅವಧಿ ಸುಮಾರು 50 ನಿಮಿಷಗಳಾಗಿವೆ.

ಹಣ ಪಾವತಿಸಲ್ಪಡುವ ಕೆಲಸದ ಅವಧಿಯಲ್ಲಿ ಯುವಜನರು ಸರಾಸರಿ 20ರಿಂದ 34 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತಾರೆ. ಪುರುಷರಲ್ಲಿ ಕೂಡಾ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯು ನಗಣ್ಯವಾಗಿದೆ. ಶಿಕ್ಷಣದಲ್ಲಿ ಶೇ.15ರಷ್ಟು ಮಂದಿ ಹಾಗೂ ನಿರುದ್ಯೋಗಿಗಳಲ್ಲಿ ಶೇ.16 ಮಂದಿ ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಉಳಿದ ಯುವ ಜನರ ಪೈಕಿ ಪ್ರತಿ 10 ಮಂದಿಯಲ್ಲಿ ಹೆಚ್ಚೆಂದರೆ ಓರ್ವ ಕ್ರೀಡೆ ಅಥವಾ ವ್ಯಾಯಾಮದಲ್ಲಿ ಸಮಯ ಕಳೆಯುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಈ ಅನುಪಾತದಲ್ಲಿ ಅಗಾಧ ಮಟ್ಟದ ಲಿಂಗಾಧಾರಿತ ವಿಭಜನೆ ಕಂಡುಬರುತ್ತದೆ.

ಅಂತಿಮವಾಗಿ ನಗರ ಪ್ರದೇಶಗಳಲ್ಲಿರುವ ಮಹಿಳೆಯರು ಸರಾಸರಿ 11 ತಾಸುಗಳನ್ನು ಸ್ವಯಂಪಾಲನೆ ಹಾಗೂ ನಿದ್ರೆಯಲ್ಲಿ ಕಳೆಯುತ್ತಾರೆ. ಇದೇ ವೇಳೆ ಗ್ರಾಮೀಣ ಪ್ರದೇಶಗಳ ಯುವಜನರು ಇದೇ ಚಟುವಟಿಕೆಗಳಿಗಾಗಿ ಗರಿಷ್ಠವೆಂದರೆ 11.50 ನಿಮಿಷಗಳನ್ನು ವ್ಯಯಿಸುತ್ತಾರೆ.

ಈ ಮೇಲಿನ ಮಾದರಿಗಳು ಹಣ ಪಾವತಿಸಲ್ಪಡುವ ಕೆಲಸಗಳಲ್ಲಿ ದುಡಿಯುವ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಜನರು ತಮ್ಮ ಸಮಯವನ್ನು ಹೇಗೆ ಕಳೆಯುತ್ತಾರೆಂಬ ಬಗ್ಗೆ ಕಿರುನೋಟವನ್ನು ಬೀರುತ್ತದೆ ಹಾಗೂ ಅವರ ದುಡಿಯುವ ಅವಧಿ ಹಾಗೂ ವಿಶ್ರಾಂತಿ, ಬಿಡುವಿನ ಚಟುವಟಿಕೆಗಳಲ್ಲಿ ಲಿಂಗಾಧಾರಿತ ವ್ಯತ್ಯಾಸಗಳಿರುವ ಬಗ್ಗೆ ಬೆಳಕುಚೆಲ್ಲುತ್ತದೆ.

 ಕೃಪೆ: theprint.n

Writer - ಸೌಮ್ಯಾ ಧನರಾಜ್

contributor

Editor - ಸೌಮ್ಯಾ ಧನರಾಜ್

contributor

Similar News