ಆಝಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ

Update: 2022-08-12 14:30 GMT

ಮಂಗಳೂರು : ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ಆಝಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಭಾರತೀಯ ಆರ್ಥಿಕತೆಯ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಕುರಿತು ವಿಶೇಷ ಉಪನ್ಯಾಸ ಗುರುವಾರ ನಡೆಯಿತು.

ಮಸ್ಕತ್‌ನ ಕಾಲೇಜ್ ಆಫ್ ಬ್ಯಾಂಕಿಂಗ್ ಆ್ಯಂಡ್ ಫೈನಾನ್ಸಿಯಲ್ ಸ್ಟಡೀಸ್‌ನ ನಿರ್ದೇಶಕ ಡಾ. ರಾಜೇಶ್ ನಾಯಕ್ ಉಪನ್ಯಾಸವನ್ನು ನೀಡಿದರು.

ಈ ಸಂದರ್ಭ ಸಿಎ ಎಸ್‌ಎಸ್ ನಾಯಕ್‌ರ ‘ವೈಸ್ ವರ್ಡ್ಸ್ ಆಫ್ ದಿ ವೈಸ್’ ಕೃತಿಯನ್ನು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ವಿವಿಧ ವಿಭಾಗದ ಮುಖ್ಯಸ್ಥರಾದ ಪ್ರೊ.ವೈ.ಮುನಿರಾಜು, ಪ್ರೊ.ಪುಟ್ಟಣ್ಣ , ಪ್ರೊ. ವಿಶ್ವನಾಥ, ಡಾ. ಪರಮೇಶ್ವರ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮೆಲ್ವಿನ್ ಜೊಸ್ವಿನ್ ಲೋಬೊ, ಶಿಹಾಬುದ್ದೀನ್ ಖಾನ್ ಸಹಕರಿಸಿದ್ದರು. ಸಹ ಪ್ರಾಧ್ಯಾಪಕಿ  ಪ್ರೀತಿ ಕೀರ್ತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News