ಸುರತ್ಕಲ್‌ನಲ್ಲಿ ʼಸಾವರ್ಕರ್‌ ವೃತ್ತʼ ಹೆಸರಿನ ಅನಧಿಕೃತ ಬ್ಯಾನರ್‌ ಪ್ರತ್ಯಕ್ಷ

Update: 2022-08-14 08:50 GMT

ಸುರತ್ಕಲ್, ಆ.14: ಸುರತ್ಕಲ್ ಪೇಟೆಯಲ್ಲಿ ʼಸಾವರ್ಕರ್‌ ವೃತ್ತʼ ಎಂಬ ಹೆಸರಿನ ಅನಧಿಕೃತ ಬ್ಯಾನರ್‌ ಪ್ರತ್ಯಕ್ಷವಾಗಿದು, ಸ್ಥಳಕ್ಕಾಗಮಿಸಿದ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ.

ಸುರತ್ಕಲ್ ನಿಂದ ಕೃಷ್ಣಾಪುರ ಕಡೆ ತಿರುವು ಪಡೆಯುವ ಮೇಲ್ಸೇತುವೆಯ ಅಡಿಯಲ್ಲಿ ಸಾವರ್ಕರ್ ಭಾವಚಿತ್ರ ಹಾಗೂ ಸಾವರ್ಕರ್ ವೃತ್ತ ಎಂಬ ಬ್ಯಾನರ್‌ ಅಳವಡಿಸಲಾಗಿತ್ತು.

ಬ್ಯಾನರ್ ಅಳವಡಿಸಿರುವ ಸ್ಥಳದಲ್ಲಿ ಪೊಲೀಸರು ಪ್ರತೀ ದಿನ ರಾತ್ರಿ ಹಗಲು ಗಸ್ತು ನಡೆಸುತ್ತಿದ್ದರು. ಅಲ್ಲದೆ, ಕೆಎಸ್ಸಾರ್ಪಿ ತುಕಡಿಯೊಂದನ್ನು ಇದೇ ಪ್ರದೇಶದಲ್ಲಿ ಇಡಲಾಗಿತ್ತು. ಇಷ್ಟೂ ಬಂದೋಬಸ್ತ್‌ ಮಾಡಿದ್ದರು ಹೇಗೆ ದುಷ್ಕರ್ಮಿಗಳು ಕೃತ್ಯ ಎಸಗಿದರು ಎಂದು ಜನರು ಪ್ರಶ್ನಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News