ಮಂಗಳೂರು ವಿ.ವಿ ಅಂತರ್ ಕಾಲೇಜು ಸಂಗೀತ ಸ್ಪರ್ಧೆ: ಆಳ್ವಾಸ್ ಕಾಲೇಜು ಚಾಂಪಿಯನ್

Update: 2022-08-14 16:56 GMT

ಮೂಡುಬಿದಿರೆ: ಸುರತ್ಕಲ್‍ನ ಗೋವಿಂದದಾಸ್ ಕಾಲೇಜಿನಲ್ಲಿ ಶುಕ್ರವಾರ ಮತ್ತು ಶನಿವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ಈ ಮೂಲಕ ಸತತ 16 ವರ್ಷಗಳಿಂದ ಚಾಂಪಿಯನ್ ಆಗಿ ಗಮನಾರ್ಹ ಸಾಧನೆ ಮಾಡಿದೆ.

ಪಾಶ್ಚತ್ಯ ಸಮೂಹಗೀತೆ, ದೇಶಭಕ್ತಿಗೀತೆ ಹಾಗೂ ಜನಪದ ಗೀತೆ ಸಮೂಹ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಶಾಸ್ತ್ರೀಯ ತಾಳವಾದ್ಯ ವೈಯಕ್ತಿಕ ವಿಭಾಗದಲ್ಲಿ ಪ್ರಸಾದ್ ಕುಮಾರ್ ಪ್ರಥಮ, ಪಾಶ್ಚತ್ಯ ವಾದ್ಯ ಸಂಗೀತ ಹಾಗೂ ಪಾಶ್ಚತ್ಯ ಗೀತೆ ವೈಯಕ್ತಿಕ ವಿಭಾಗದಲ್ಲಿ ವಿಲ್ಸ್‍ಟನ್ ಡಿಸೋಜ ಪ್ರಥಮ, ಶಾಸ್ತ್ರೀಯ ಸ್ವರವಾದ್ಯ ವೈಯಕ್ತಿಕ ವಿಭಾಗದಲ್ಲಿ ಅರ್ಜುನ್ ಆನಂದ್ ಪ್ರಥಮ ಸ್ಥಾನ ಪಡೆದಿದ್ದಾರೆ. 

ಲಘ ಸಂಗೀತ ವೈಯಕ್ತಿಕ ವಿಭಾಗದಲ್ಲಿ ಗ್ರೀಷ್ಮಾ ದ್ವೀತಿಯ ಸ್ಥಾನ, ಜಾನಪದ ಸಂಗೀತ ಮೇಳದಲ್ಲಿ ಆಳ್ವಾಸ್ ತಂಡ ದ್ವಿತೀಯ ಸ್ಥಾನ ಪಡೆದಿದೆ. ಶಾಸ್ತ್ರೀಯ ಗೀತೆ ವೈಯಕ್ತಿಕ ವಿಭಾಗದಲ್ಲಿ ಪ್ರಿಯಂವದ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹಾಗೂ ಪ್ರಾಂಶುಪಾಲ ಡಾ.ಕುರಿಯನ್ ಅಭಿನಂದಿಸಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News