ಒಂದು ದಿನ ಉಚಿತ ಪ್ರಯಾಣ: ತುಂಬಿ ತುಳುಕಿದ BMTC ಬಸ್ ಗಳು

Update: 2022-08-15 16:06 GMT

ಬೆಂಗಳೂರು, ಆ. 15: ಎಪ್ಪತ್ತೈದನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಗಳಲ್ಲಿ ಪ್ರಯಾಣಿಕರಿಗೆ ಉಚಿತ ವ್ಯವಸ್ಥೆ ಕಲ್ಪಿಸಿದ್ದರಿಂದ ಬಹುತೇಕ ಬಸ್ ಗಳು ಸೋಮವಾರ ಜನರಿಂದ ತುಂಬಿ ತುಳುಕುತ್ತಿದ್ದವು.

ಬಿಎಂಟಿಸಿಯ ಕೇಂದ್ರ ಬಸ್ ನಿಲ್ದಾಣ ಮೆಜೆಸ್ಟಿಕ್ ಸೇರಿದಂತೆ ನಗರದ ಬಹುತೇಕ ಬಸ್ ನಿಲ್ದಾಣಗಳಲ್ಲಿ ಜನ ಜಂಗುಳಿ ದೊಡ್ಡ ಸಂಖ್ಯೆಯಲ್ಲಿಯೇ ನೆರೆದಿತ್ತು.

ಇದನ್ನೂ ಓದಿ:  ಬೆಂಗಳೂರು | ಕಾಂಗ್ರೆಸ್ ನೇತೃತ್ವದಲ್ಲಿ ‘ಸ್ವಾತಂತ್ರ್ಯ ನಡಿಗೆ’: ಹರಿದು ಬಂದ ಜನಸಾಗರ

ಲಾಲ್ ಬಾಗ್ ಫಲಪುಷ್ಪಾ ಪ್ರದರ್ಶನ, ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸರಣಿ ರಜೆ ಇದ್ದ ಕಾರಣ ನಗರದ ಜನತೆ ಹಲವು ಸ್ಥಳಗಳಿಗೆ ಉಚಿತ ಪ್ರಯಾಣ ಮಾಡಿದರು.

ಬಡ ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು ಸೇರಿದಂತೆ ನಗರ ಜನತೆ ತಮ್ಮ ಮನೆ ಮಕ್ಕಳನ್ನು ಕಟ್ಟಿಕೊಂಡು ವಿಧಾನಸೌಧ, ವಿಕಾಸಸೌಧ, ಲಾಲ್ ಬಾಗ್, ಹೈಕೋರ್ಟ್, ಕಬ್ಬನ್ ಪಾರ್ಕ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ವಿವಿಧ ಪ್ರದೇಶಗಳಿಗೆ ಉಚಿತವಾಗಿ ತೆರಳಿ ಖುಷಿಪಟ್ಟರು.

ಪ್ರತಿನಿತ್ಯ ಬಸ್ ಚಾರ್ಜ್ ಕೊಟ್ಟು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡುತ್ತಿದ್ದ ಜನತೆ ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಪ್ರಮಾಣ ಮಾಡಿ ಆನಂದದಿಂದ ಸಂಭ್ರಮಿಸಿದರು.
 
ಒಟ್ಟು ಬಿಎಮ್ ಟಿಸಿಯ 5,675 ಶೆಡ್ಯೂಲ್, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್ಸಿನ ನಿಗದಿತ ಸಾಮರ್ಥ್ಯಕ್ಕಿಂತ ಎರಡು ಮೂರು ಪಟ್ಟು ಜನ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News