ದಲಿತರ ಮೇಲಿನ ದೌರ್ಜನ್ಯದಿಂದ ಮನನೊಂದು ರಾಜಸ್ಥಾನದ ಕಾಂಗ್ರೆಸ್ ಶಾಸಕ ರಾಜೀನಾಮೆ

Update: 2022-08-16 06:26 GMT

ಜೈಪುರ್: ದಲಿತರ ಮೇಲಿನ ದೌರ್ಜನ್ಯ (atrocities on Dalits) ಪ್ರಕರಣಗಳಿಂದ ಮನ ನೊಂದಿರುವ ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ಅವರು ಸೋಮವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

 ತಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಶಾಸಕರಾಗಿ ಉಳಿಯುವ ಹಕ್ಕು ನನಗಿಲ್ಲ ಎಂದು ಅವರು ಹೇಳಿದ್ದಾರೆ.

ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಜಾಲೋರ್‌ನಲ್ಲಿ ಶಾಲಾ ಶಿಕ್ಷಕರಿಂದ ಥಳಿಸಲ್ಪಟ್ಟ ದಲಿತ ಬಾಲಕನೊಬ್ಬ ಸಾವನ್ನಪ್ಪಿದ (death of a Dalit boy ) ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

“ನಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ನಾವು ವಿಫಲವಾದಾಗ, ಹುದ್ದೆಯಲ್ಲಿ ಉಳಿಯಲು ನಮಗೆ ಯಾವುದೇ ಹಕ್ಕಿಲ್ಲ. ನನ್ನ ಆಂತರಿಕ ಧ್ವನಿಯನ್ನು ಆಲಿಸಿದ ನಂತರ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಸ್ಥಾನಮಾನವಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತೇನೆ" ಎಂದು ಬರನ್-ಅತ್ರು ಕ್ಷೇತ್ರದ ಶಾಸಕ ಮೇಘವಾಲ್ ತಮ್ಮ ರಾಜೀನಾಮೆ ಪತ್ರವನ್ನು ತಿಳಿಸಿದ್ದಾರೆ.

ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೂ, ದಲಿತರು ಮತ್ತು ಇತರ ವಂಚಿತ ವರ್ಗಗಳ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂದು ಮೇಘವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News