ಉಪ್ಪಿನಂಗಡಿ; ಹನಿಟ್ರ್ಯಾಪ್ ಆರೋಪ: ದೂರು ದಾಖಲು

Update: 2022-08-16 17:36 GMT
ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ: ಅಶ್ಲೀಲ ಮಾತುಗಳೊಂದಿಗೆ ಮೊಬೈಲ್ ಕರೆ ಮಾಡಿ ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಉಪ್ಪಿನಂಗಡಿಯ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೋರ್ವರಿಗೆ  ಮೊಬೈಲ್ ಕರೆ ಮಾಡಿದ ಮಹಿಳೆಯೋರ್ವರು ತೀರಾ ಮುಜುಗರವೆನಿಸುವ  ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾಳೆನ್ನಲಾಗಿದ್ದು, ಆಕೆಯ ಈ ನಡೆಗೆ ವಿರೋಧ ವ್ಯಕ್ತಪಡಿಸಿದರೂ 3-4 ಬಾರಿ ಕರೆ ಮಾಡಿ ವಿಕೃತ ವರ್ತನೆ ತೋರಿದಾಗ ಇದೊಂದು  ಬ್ಲ್ಯಾಕ್ ಮೇಲ್ ಜಾಲದ  ಕೃತ್ಯವೆಂದು  ಶಂಕಿಸಿ  ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ದೂರು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News