×
Ad

ವಿದ್ಯಾರ್ಥಿಗಳನ್ನು ಬೋಧನೆಯಿಂದ ವಂಚಿತರಾಗಿಸುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ: ಸಚಿವ ಬಿ.ಸಿ.ನಾಗೇಶ್

Update: 2022-08-17 15:44 IST
 ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ವಿದ್ಯಾರ್ಥಿಗಳನ್ನು ಬೋಧನೆಯಿಂದ ವಂಚಿತರಾಗಿಸಿ, ಅವರ ಸುರಕ್ಷತೆಗೆ ಧಕ್ಕೆ ತರಬಹುದಾದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಹುತೇಕ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುವುದರ ಜೊತೆ ಶ್ರದ್ಧೆಯಿಂದ ಪರಿಣಾಮಕಾರಿಯಾಗಿ ಪಾಠ ಬೋಧನೆಯಲ್ಲಿ ತೊಡಗಿಸಿಕೊಂಡಿವುದನ್ನು ಶಾಲಾ ಭೇಟಿ ಹಾಗೂ ಅಧಿಕಾರಿಗಳ ವರದಿ ಮೂಲಕ ಗಮನಿಸಿರುತ್ತೇನೆ.

ಆದರೆ ಕೆಲವು ಪ್ರಕರಣಗಳಲ್ಲಿ ಶಿಕ್ಷಕರು ಶಾಲೆಗೆ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು ಹಾಗೂ ಶಿಕ್ಷಕರು ಶಾಲೆಗೆ ಹಾಜರಾಗದೆ ತರಗತಿ ಕೋಣೆಗಳ ಬೀಗ ತೆಗೆಯದೆ ಮಕ್ಕಳು ಶಾಲಾ ಆವರಣದಲ್ಲಿ ಶಿಕ್ಷಕರಿಗಾಗಿ ಕಾಯುತ್ತಾ ಕೂರುವುದನ್ನು ನಾನು ಗಮನಿಸಿರುತ್ತೇವೆ. ಉದಾಹರಣೆಗೆ ದಿನಾಂಕ: 12.08.2022 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಗೆರೆ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಇಲ್ಲಿಗೆ ಅನಿರೀಕ್ಷಿತ ಭೇಟಿ ನೀಡಿದಾಗ ಶಾಲೆಯ ಮೂರು ಜನ ಶಿಕ್ಷಕರು ಬೆಳಗ್ಗೆ 10.30ರವರೆಗೆ ಶಾಲೆಗೆ ಹಾಜರಾಗಿರುವುದಿಲ್ಲ. ಮಕ್ಕಳು ಶಾಲೆಯ ಆವರಣದಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದರು.

ಮಕ್ಕಳನ್ನು ಬೋಧನೆಯಿಂದ ವಂಚಿತರಾಗಿಸಿ, ಅವರ ಸುರಕ್ಷತೆಗೆ ಧಕ್ಕೆ ತರಬಹುದಾದ ಶಿಕ್ಷಕರ ಇಂತಹ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಪ್ರಕರಣಗಳು ನಡೆದಲ್ಲಿ ಕಠಿಣ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡುವಂತೆ ಎಲ್ಲಾ ಜಿಲ್ಲೆಗಳ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News