ಸವಣೂರು-ಮಾಡಾವು ರಸ್ತೆ ಕಾಮಗಾರಿ ಹಿನ್ನೆಲೆ; ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

Update: 2022-08-17 10:54 GMT
ಸಾಂದರ್ಭಿಕ ಚಿತ್ರ

ಮತ್ತೂರು: ತಾಲೂಕಿನ  ಸವಣೂರು-ಮಾಡಾವು ಸಿದ್ಧಮೂಲೆ ರಸ್ತೆ ಕಾಂಕ್ರೀಟಿಕರಣ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ರಸ್ತೆಯಾಗಿ ಸವಣೂರು-ಬಂಬಿಲ ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆಗೊಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯು ಇಲ್ಲಿನ ಬೊಳಿಕ್ಕಲ ಎಂಬಲ್ಲಿಂದ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಆ.18ರಿಂದ ಸೆ.17ರ ತನಕ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ. ಈ  ಅವಧಿಯಲ್ಲಿ ಸಾರ್ವಜನಿಕ ಲಘು ವಾಹನಗಳು ಬದಲಿ ರಸ್ತೆಯ ಮೂಲಕ ಅಂದರೆ ಸವಣೂರಿನಿಂದ ಬಂಬಿಲ-ಮಂಜುನಾಥ ನಗರ-ಅಂಕತ್ತಡ್ಕ ರಸ್ತೆಯಲ್ಲಿ ಸಂಚರಿಸುವಂತೆ ಕ್ರಮಕೈಗೊಂಡು, ಕಾಮಗಾರಿ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News