ಸುಳ್ಯ: ಹಠ ಮಾಡಿದ್ದಕ್ಕೆ ಕಾದ ಸೌಟಿನಿಂದ ಮಗುವಿಗೆ ಬರೆ ಹಾಕಿದ ತಾಯಿ!

Update: 2022-08-17 16:31 GMT

ಸುಳ್ಯ: ಮಗು ಹಠ ಮಾಡುತ್ತಿದೆ ಎಂದು ಕೋಪಗೊಂಡ ತಾಯಿಯೋರ್ವಳು ಮಗುವಿಗೆ ಕಾದ ಸೌಟಿನಿಂದ ಬರೆ ಹಾಕಿದ್ದ ಘಟನೆ ಸುಳ್ಯದ ನಾವೂರಿನಲ್ಲಿ ನಡೆದಿದೆ.

ನಾಲ್ಕು ವರ್ಷ ಐದು ತಿಂಗಳು ಪ್ರಾಯದ ಹೆಣ್ಣು ಮಗುವಿಗೆ ಸುಳ್ಯದ ಗಾಂಧಿನಗರ ನಾವೂರು ನಿವಾಸಿಯಾದ ಕಾವ್ಯ ಶ್ರೀ ಎಂಬ ಮಹಿಳೆ ಕಾದ ಸೌಟಿನಿಂದ ಬರೆ ಎಳೆದಿದ್ದಾಳೆ. ಈಕೆ ಮೊದಲ ಗಂಡನಿಂದ ವಿಚ್ಛೇದನ ಪಡೆದು ಮಂಜೇಶ್ವರ ನಿವಾಸಿಯ ಜತೆ ವಾಸಿಸುತ್ತಿದ್ದಾಳೆ. ಸೌಟಿನಿಂದ ಮಗುವಿಗೆ ಬರೆ ಹಾಕಿದ ಆರೋಪಿ ಮಹಿಳೆ ತನ್ನ ತಾಯಿ ಮನೆ ಸುಳ್ಯದ ನಾವೂರಿನಲ್ಲಿ ಮಗುವಿನೊಂದಿಗೆ ವಾಸವಾಗಿದ್ದಾಳೆ.

ಮಗುವನ್ನು ಸಿಡಿಪಿಒ ನೇತೃತ್ವದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳ ತಂಡ ಮನೆಗೆ ತೆರಳಿದಾಗ ಅವರ ಜೊತೆಗೂ ಆರೋಪಿ ಮಹಿಳೆ ದರ್ಪ ತೋರಿದ್ದಾಳೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News