BBMP ಚುನಾವಣೆ; ಶೀಘ್ರದಲ್ಲೇ ದಿನಾಂಕ ಘೋಷಣೆ ಸಾಧ್ಯತೆ

Update: 2022-08-18 12:11 GMT

ಬೆಂಗಳೂರು, ಆ.18: ಬಿಬಿಎಂಪಿಗೆ (BBMP) ಸಂಬಂಧಿಸಿದಂತೆ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತಯಾರಿ ಆರಂಭಿಸಿದ್ದು, ಶೀಘ್ರದಲ್ಲೇ ದಿನಾಂಕ ಘೋಷಣೆ ಸಾಧ್ಯತೆ ಇದೆ.

ಈ ಸಂಬಂಧ ಆ.20ರಂದು ಮಹತ್ವದ ಸಭೆ ನಡೆಸಲಿರುವ ಚುನಾವಣಾ ಆಯೋಗ, ಪೂರ್ವ ಭಾವಿ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಹಲವು ಸೂಚನೆ ಮತ್ತು ಮಾರ್ಗದರ್ಶನ ನೀಡಲಿದೆ.

ಪ್ರಮುಖವಾಗಿ ಕರಡು ಮತದಾರರ ಪಟ್ಟಿ, ಆನ್‍ಲೈನ್‍ನಲ್ಲಿ ಮತದಾರರಿಗೆ ಸುಲಭ ರೀತಿಯಲ್ಲಿ ಮಾಹಿತಿ, ಮತಗಟ್ಟೆ ಅದರಲ್ಲೂ ಸೂಕ್ಷ್ಮ ಮತಗಳ ಪರಿಶೀಲನೆ, ಸಿಬ್ಬಂದಿ ನಿಯೋಜನೆ. ಮತದಾನ, ಎಣಿಕೆ ದಿನದಂದು ನಡೆಯುವ ಪ್ರಕ್ರಿಯೆ ಸಂದರ್ಭದಲ್ಲಿ ಅಗತ್ಯ ನೌಕರರ ನಿಯೋಜನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಲು ಸಭೆ ನಡೆಸಲಾಗುತ್ತಿದೆ ಎಂದು ಆಯೋಗ ಹೇಳಿದೆ.

ಈ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ವಾರ್ತಾ ಇಲಾಖೆ ಆಯುಕ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಎಲ್ಲಾ ವಲಯಗಳ ಜಂಟಿ ಆಯುಕ್ತರು ಭಾಗಿಯಾಗಲಿದ್ದಾರೆ.

2020ರ ಸೆ.10ರಂದು ಪಾಲಿಕೆಯಲ್ಲಿ ಚುನಾಯಿತ ಸದಸ್ಯರ ಅವಧಿ ಅಂತ್ಯಗೊಂಡಿತ್ತು. ಇನ್ನೂ, ಇತ್ತೀಚಿಗಷ್ಟೇ, ಬಿಬಿಎಂಪಿ ಚುನಾವಣೆಗೆ ಹಲವಾರು ಅಡ್ಡಿಆತಂಕದ ನಡುವೆಯು ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News