ಫಾಝಿಲ್ ಕೊಲೆ ಪ್ರಕರಣ: ಆರೋಪಿ ಹರ್ಷಿತ್ ಗೆ 14 ದಿನಗಳ ನ್ಯಾಯಾಂಗ ಬಂಧನ

Update: 2022-08-18 16:47 GMT

ಸುರತ್ಕಲ್, ಆ.18 : ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದ್ದ ಆರೋಪಿ ಹರ್ಷಿತ್ ಗೆ ಜೆಎಂಎಫ್ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಹರ್ಷಿತ್ ಮೇಲೆ ಫಾಝಿಲ್ ಅವರ ಕೊಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಆರೋಪಿಯನ್ನು ಆಗಸ್ಟ್ 17ರಂದು ಬಂಧಿಸಿದ್ದರು.

ಪೊಲೀಸರು ಗುರುವಾರ ಆರೋಪಿ ಹರ್ಷಿತನನ್ನು ಎರಡನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಸುರತ್ಕಲ್ ನ ಮಾರುಕಟ್ಟೆಯ ಮುಹಮ್ಮದ್ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಮತ್ತು ಕೃತ್ಯ ಎಸಗಲು ಕಾರು ನೀಡಿದ್ದ ಓರ್ವನನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News