ಮುಕ್ಕಚ್ಚೆರಿ; ಡೈಮಂಡ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಸ್ವಾತಂತ್ರ್ಯೋತ್ಸವ
Update: 2022-08-21 12:42 IST
ಮುಕ್ಕಚ್ಚೆರಿ; ಡೈಮಂಡ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ ಮುಕ್ಕಚ್ಚೆರಿ ಉಳ್ಳಾಲ, ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗೌರವಾಧ್ಯಕ್ಷರಾದ ಇಬ್ರಾಹಿಂ ಖಲೀಲ್ ದ್ವಜಾರೋಹನ ನೆರವೇರಿಸಿ ರಾಷ್ಟ್ರಗೀತೆ ಹಾಡುವ ಮೂಲಕ ಗೌರವ ಸಮರ್ಪಿಸಲಾಯಿತು. ತದನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಾಸಿರ್, ಕೋಶಾಧಿಕಾರಿ ಇಕ್ಬಾಲ್, ಹಿರಿಯ ಸದಸ್ಯರಾದ ಅಬ್ದುಲ್ ಸಲಾಂ, ಹನೀಫ್, ಅರ್ಫೈನ್, ಸರ್ಫರಾಝ್, ಇಜಾಝ್, ಆಸಿಫ್ ಅಬ್ದುಲ್ಲ, ಸಾಬುದ್ದಿನ್, ಯಾಸೀರ್ ಇಸ್ಮಾಯಿಲ್ ಮತ್ತು ಇತರ ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿ, ವಂದನೆ ಸಲ್ಲಿಸಿದರು.