×
Ad

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ‘ಅಮೆಝಾನ್' ವಿರುದ್ಧ ದೂರು

Update: 2022-08-21 19:23 IST

ಬೆಂಗಳೂರು, ಆ.21: ಶ್ರೀ ಕೃಷ್ಣ ಮತ್ತು ರಾಧೆಯ ಅಶ್ಲೀಲ ಚಿತ್ರಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಲಾಗಿದೆ ಎಂದು ಅಮೆಝಾನ್(Amazon)ಕಂಪೆನಿಯ ವಿರುದ್ಧ ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಇ-ಕಾಮರ್ಸ್ ಪ್ಲಾಟ್‍ಫಾರ್ಮ್ ‘ಇಂಕೋಲಜಿ ಹಿಂದೂ ಗಾಡ್ಸ್-ಫೈನ್ ಆಟ್ರ್ಸ್ ಪೇಂಟಿಂಗ್’ ಎಂಬ ಶೀರ್ಷಿಕೆಯಡಿ ಮಾರಾಟ ಮಾಡುತ್ತಿದ್ದ ಚಿತ್ರಗಳು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News