×
Ad

ಬೆಂಗಳೂರು: ಎಸ್ ಡಿಪಿಐ ಬೃಹತ್ ಜನಾಧಿಕಾರ ಸಮಾವೇಶ

Update: 2022-08-21 23:58 IST

ಬೆಂಗಳೂರು, 21 ಆ. 2022: 'ಈ ದೇಶ ಎಲ್ಲರದ್ದಲ್ಲ ಎಂದು ಕೆಲವರು ಹೇಳುತ್ತಿದ್ದಾರೆ, ಹಾಗೆಯೇ ಹಿಂದೂ ರಾಷ್ಟ್ರದ ಸಂವಿಧಾನ ಸಿದ್ದ ಪಡಿಸುತ್ತಿರುವುದಾಗಿಯೂ ಕೆಲವರು ಹೇಳಿಕೊಂಡಿದ್ದಾರೆ ಇದು ದೇಶವನ್ನು ಎತ್ತ ಕೊಂಡುಯ್ಯುತ್ತದೆ?' ಎಂದು ಎಸ್ ಡಿಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರು ಪ್ರಶ್ನೆ ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ನಡೆದ 5ನೇ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ 2002 ಗುಜರಾತ್ ನರಮೇಧ ಸಂದರ್ಭದಲ್ಲಿ ನಡೆದ ಗರ್ಭಿಣಿ ಬಿಲ್ಕಿಸ್ ಬಾನೋ ಅತ್ಯಾಚಾರ ಮತ್ತು ಆಕೆಯ ಕುಟುಂಬದ 7 ಸದಸ್ಯರ ಕೊಲೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಕ್ಷಮಾಪಣೆ ನೀಡಿ ಜೈಲಿನಿಂದ ಬಿಡುಗಡೆ ಮಾಡಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಮಾತನಾಡಿ, 'ಬಂಡವಾಳಶಾಹಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಮೋದಿಯವರು ಸಾಮಾನ್ಯರಿಗೆ ನೀಡುವ ಸೀಮೆಎಣ್ಣೆ, ಅಕ್ಕಿಯ ಮೇಲಿನ ಸಬ್ಸಿಡಿ ಬಗ್ಗೆ ಲೇವಡಿ ಮಾಡುತ್ತಾರೆ ಎಂದರು. ಜೊತೆಗೆ ರಾಜ್ಯದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳು ಬಿಜೆಪಿಯನ್ನು ತೋರಿಸಿ ಅಲ್ಪಸಂಖ್ಯಾತರ ಮತ ಪಡೆಯುತ್ತಾರೆ ಆದರೆ ಸಮುದಾಯದ ಸಮಸ್ಯೆಗಳ ಬಗ್ಗೆ ಚಕಾರ ಎತ್ತುವುದಿಲ್ಲ ಎಂದರು. ಜೊತೆಗೆ ದಲಿತರದೂ ಇದೇ ಪರಿಸ್ಥಿತಿ' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News