ಸ್ವಾತಂತ್ರ್ಯದ ಅಮೃತ ಮಹೋತ್ಸವ; ಮುಸ್ಲಿಂ ಒಕ್ಕೂಟ ಮುಲ್ಕಿ- ಕಿನ್ನಿಗೋಳಿ ಮದರಸ ಮಕ್ಕಳ ಸ್ಪರ್ಧಾ ಕಾರ್ಯಕ್ರಮ
ಮುಲ್ಕಿ, ಆ. 23: ಮುಸ್ಲಿಂ ಒಕ್ಕೂಟ ಕಿನ್ನಿಗೋಳಿ - ಮುಲ್ಕಿ ವಲಯ ಇದರ ಅಧೀನದಲ್ಲಿ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮುಲ್ಕಿ ತಾಲೂಕು ವಲಯ ಮದ್ರಸ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೆ.ಜೆ.ಎಂ. ಸಮುದಾಯಯಭವನ ಶಾಂತಿನಗರ ಗುತ್ತಕಾಡುವಿನಲ್ಲಿ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ 168 ಸ್ಪರ್ಧಾಥಿ೯ಗಳು ಭಾಗವಹಿಸಿದ್ದರು. ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಆರಿಫ್ ಬಾಖವಿ ದುವಾ ನೆರವೇರಿಸಿದರು. ಅಬ್ದುಲ್ ರಝಕ್ ಕಾಪು ಕಾರ್ಯಕ್ರಮವನ್ನು ಉದ್ಘಾಟಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಸ್ಲಿಂ ಒಕ್ಕೂಟ ಮುಲ್ಕಿ- ಕಿನ್ನಿಗೋಳಿ ವಲಯಾಧ್ಯಕ್ಷರಾದ ಹಾಜಿ ಟಿ.ಎಚ್. ಮಯ್ಯದ್ದಿ ವಹಿಸಿದ್ದರು. ಮುಸ್ಲಿಂ ಒಕ್ಕಕೂಟದ ಪ್ರಧಾನ ಕಾರ್ಯದರ್ಶಿ ಹಾಜಿ ಕೆ. ಎ. ಇಬ್ರಾಹಿಂ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಕ್ಷಿಕೆರೆ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ನೂರಾನಿಯ, ಅಹ್ಮದ್ ನೌಝಿಲ್ ಮುಲ್ಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟಿ. ಕೆ. ಅಬ್ದುಲ್ ಖಾದರ್ ಮತ್ತು ಶರೀಫ್ ಮೊಯ್ದೀನ್ ಉಸ್ತಾದ್ ಕಲ್ಕರೆ ಅವರು ವಂದಿಸಿ, ನಿರೂಪಣೆಗೈದರು.
ಈ ಸಂದರ್ಭದಲ್ಲಿ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಗ್ಯಾಲರಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿ ಅಹ್ಮದ್ ನೌಝಿಲ್ ಮುಲ್ಕಿ, ಅವರು ಚಿತ್ರ ಗ್ಯಾಲರಿಯ ಉದ್ಘಾಟನೆ ನೆರವೇರಿಸಿದರು.
ಮದ್ಯಾಹ್ನದ ಬಳಿಕ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆ ಜೆ ಎಂ ಶಾಂತಿನಗರ ಇದರ ಅಧ್ಯಕ್ಷ ಜೆ.ಎಚ್. ಜಲೀಲ್ ವಹಿಸಿದ್ದರು.
ಒಕ್ಕೂಟದ ಉಪಾಧ್ಯಕ್ಷ ಟಿ.ಕೆ. ಅಬ್ದುಲ್ ಖಾದರ್ ಅತಿಥಿಗಳನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಾಈಶ್ ಚೌಟ, ಕರ್ನಿರೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಮುಹಮ್ಮದ್ ಆಲಿ ಕರ್ನಿರೆ, ಹಳೆಯಂಗಡಿ ಮುಸ್ಲಿಂ ಒಕ್ಕೂಟ ಅಧ್ಯಕ್ಷರಾದ ಸಾಹುಲ್ ಹಮೀದ್ ಕದಿಕೆ, ಕಿನ್ನಿಗೋಳಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ , ಹಿದಾಯತ್ ಆಂಗ್ಲ ಪ್ರೌಢಶಾಲಾ ಸಂಚಾಲಕ ಕೆ. ಅಬ್ದುಲ್ಲಾ ಉಪಸ್ಥಿತರಿದ್ದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎ. ಇಬ್ರಾಹಿಂ ಮುಲ್ಕಿ ವಂದಿಸಿದರು.