ಮಂಗಳೂರು ಸಹಿತ10 ಮಹಾನಗರ ಪಾಲಿಕೆಗಳ ಮೇಯರ್-ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟ

Update: 2022-08-24 10:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.14: ರಾಜ್ಯ ಸರಕಾರವು ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಸೇರಿದಂತೆ ಹತ್ತು ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿ ಬುಧವಾರ ಅಧಿಸೂಚನೆ ಹೊರಡಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್-ಸಾಮಾನ್ಯ, ಉಪ ಮೇಯರ್-ಸಾಮಾನ್ಯ ಮಹಿಳೆ, ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಸಾಮಾನ್ಯ, ಉಪ ಮೇಯರ್-ಹಿಂದುಳಿದ ವರ್ಗ ಎ(ಮಹಿಳೆ), ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್-ಹಿಂದುಳಿದ ವರ್ಗ ಎ, ಉಪ ಮೇಯರ್-ಸಾಮಾನ್ಯ ಮಹಿಳೆ.

ತುಮಕೂರು ಮಹಾನಗರ ಪಾಲಿಕೆಯ ಮೇಯರ್-ಪರಿಶಿಷ್ಟ ಜಾತಿ(ಮಹಿಳೆ), ಉಪ ಮೇಯರ್-ಹಿಂದುಳಿದ ವರ್ಗ ಎ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್-ಹಿಂದುಳಿದ ವರ್ಗ ಎ(ಮಹಿಳೆ), ಉಪ ಮೇಯರ್-ಸಾಮಾನ್ಯ(ಮಹಿಳೆ), ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್-ಸಾಮಾನ್ಯ, ಉಪ ಮೇಯರ್-ಪರಿಶಿಷ್ಟ ಜಾತಿ(ಮಹಿಳೆ).

ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್-ಸಾಮಾನ್ಯ(ಮಹಿಳೆ), ಉಪ ಮೇಯರ್-ಹಿಂದುಳಿದ ವರ್ಗ ಎ(ಮಹಿಳೆ).

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್-ಸಾಮಾನ್ಯ(ಮಹಿಳೆ), ಉಪಮೇಯರ್-ಸಾಮಾನ್ಯ, ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್-ಪರಿಶಿಷ್ಟ ಜಾತಿ, ಉಪಮೇಯರ್-ಸಾಮಾನ್ಯ, ವಿಜಯಪುರ ಮಹಾನಗರ ಪಾಲಿಕೆಯ ಮೇಯರ್-ಪರಿಶಿಷ್ಟ ಪಂಗಡ, ಉಪ ಮೇಯರ್-ಹಿಂದುಳಿದ ವರ್ಗ ಬಿ.ಗೆ ಮೀಸಲಾತಿ ನಿಗದಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಸಾಹಿತ್ಯ ಪ್ರಶಸ್ತಿಗೆ ದಾದಾಪೀರ್, ಬಾಲ ಸಾಹಿತ್ಯ ಪ್ರಶಸ್ತಿಗೆ ತಮ್ಮಣ್ಣ ಆಯ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News