×
Ad

ಬೆಂಗಳೂರು | ಸರಕಾರದ ಟೆಂಡರ್ ಕೊಡಿಸುವುದಾಗಿ ಕರೆಸಿ ಉದ್ಯಮಿ ಪುತ್ರನ ಸುಲಿಗೆ: ನಾಲ್ವರು ಆರೋಪಿಗಳ ಬಂಧನ

Update: 2022-08-24 19:01 IST

ಬೆಂಗಳೂರು, ಆ.24: ಸರಕಾರದ ಟೆಂಡರ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರ ಪುತ್ರನಿಂದ 25 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬ್ಯಾಟರಾಯನಪುರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಉದ್ಯಮಿ ರವಿ ಅವರ ಪುತ್ರ ಸೂರಜ್‍ಗೆ ಪಿಸ್ತೂಲ್ ತೋರಿಸಿ ಬೆದರಿಸಿ ಹಲ್ಲೆ ನಡೆಸಿ ಸುಲಿಗೆ ಮಾಡಿದ ಆರೋಪ ಪ್ರಕರಣ ಸಂಬಂಧ ಪುಷ್ಪಾ, ಅಯ್ಯಪ್ಪ ಅರ್ಜುನ್, ರಾಕೇಶ್ ಹಾಗೂ ಸಂತೋಷ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸರಕಾರದ ಟೆಂಡರ್ ಕೊಡಿಸುವುದಾಗಿ ಕರೆಸಿಕೊಂಡು ಆರೋಪಿ ಪುಷ್ಪಾ ಬಂಧಿತ ಮೂವರ ಜೊತೆ ಸೇರಿ ಉದ್ಯಮಿ ಪುತ್ರನನ್ನು ಟ್ರ್ಯಾಪ್ ಮಾಡಿದ್ದಾಳೆ. ಆನಂತರ ಸೂರಜ್‍ನಿಗೆ ಬೆದರಿಕೆವೊಡ್ಡಿ ಅಪಹರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News