ಬೆಂಗಳೂರು: ಭಾರೀ ಮಳೆಗೆ 4,545 ಹೊಸ ರಸ್ತೆ ಗುಂಡಿಗಳು ಪತ್ತೆ!
ಬೆಂಗಳೂರು, ಆ.25: ಬೆಂಗಳೂರಿನಲ್ಲಿ ಮಳೆಯಿಂದಾಗಿ ಮತ್ತೆ ರಸ್ತೆ ಗುಂಡಿಗಗಳು ಸೃಷ್ಟಿಯಾಗಿದ್ದು, ಹೊಸದಾಗಿ 4,545 ರಸ್ತೆ ಗುಂಡಿಗಳನ್ನು ಪತ್ತೆಯಾಗಿವೆ.
ಬಿಬಿಎಂಪಿ (BBMP) ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ನಗರದ ಸಂಚಾರ ಪೊಲೀಸರು ಜಿಯೋ ಮ್ಯಾಪ್ ಹಾಗೂ ಫಿಕ್ಸ್ ಮೈ ಸ್ಟ್ರೀಟ್ ಮೂಲಕ ನಡೆಸಿರುವ ಸಮೀಕ್ಷೆಯಲ್ಲಿ ಬರೋಬ್ಬರಿ 4,545 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 1,090 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿದ್ದು, ಈ ಪೈಕಿ 643 ಗುಂಡಿಗಳನ್ನು ಮುಚ್ಚಲಾಗಿದೆ. 447 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇವೆ. ರಸ್ತೆ ಮೂಲಸೌಕರ್ಯದ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಈವರೆಗೆ 335 ರಸ್ತೆ ಗುಂಡಿಗಳಾಗಿದ್ದು, 306 ಗುಂಡಿಗಳನ್ನು ಮುಚ್ಚಲಾಗಿದೆ. 29 ಗುಂಡಿಗಳು ಮುಚ್ಚಬೇಕಿದೆ.
8 ವಲಯಗಳ ವಿವಿಧ ವಾರ್ಡ್‍ಗಳಲ್ಲಿ 547 ರಸ್ತೆ ಗುಂಡಿಗಳ ಪೈಕಿ 210 ಮುಚ್ಚಿದ್ದು, 337 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇವೆ. ಬಿಎಂಆರ್‍ಸಿಎಲ್ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ 51 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿದ್ದು, ಈ ಪೈಕಿ 46 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು 4 ಕಡೆಗಳಲ್ಲಿ ಬಾಕಿ ಇದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಇಂಜಿನಿಯರೊಬ್ಬರು ಆ. 20ರವರೆಗೆ 4,545 ರಸ್ತೆ ಗುಂಡಿಗಳ ಪೈಕಿ ಈವರೆಗೆ ಒಟ್ಟು 3,905 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಿಬಿಎಂಪಿ ಹೊರ ವಲಯದ 193 ಮತ್ತು ಮುಚ್ಚಬೇಕಿರುವ 447 ಸೇರಿದಂತೆ 640 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಉಳಿದಿವೆ ಎಂದು ತಿಳಿಸಿದರು.