×
Ad

ಬೈಕಂಪಾಡಿ, ಅಂಗರಗುಂಡಿ ರಸ್ತೆಯ ಇಕ್ಕೆಲಗಳಲ್ಲಿ ಲಾರಿಗಳು ಪಾರ್ಕಿಂಗ್; ಜನರಿಗೆ ತೊಂದರೆಯಾಗುವ ಕುರಿತು ಪೊಲೀಸರಿಗೆ ಮನವಿ

Update: 2022-08-26 22:05 IST

ಸುರತ್ಕಲ್, ಆ.26: ಬೈಕಂಪಾಡಿ, ಅಂಗರಗುಂಡಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಲಾರಿಗಳು ಅನಧಿಕೃತ ಪಾರ್ಕಿಂಗ್ ಮಾಡುತ್ತಿದ್ದು ಜನರಿಗೆ ತೊಂದರೆಗಳಾಗುತ್ತಿದೆ. ಈ ಕುರಿತು ಶೀಘ್ರ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಉತ್ತರ ಸಂಚಾರ ಪೊಲೀಸರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕೈಗಾರಿಕೆಗಳಿಗೆ ಸರುಕು ಸರಬರಾಜು‌ ಮಾಡುವ ಬೃಹತ್ ಲಾರಿಗಳಿಂದಾಗಿ ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಪಾದಚಾರಿಗಳು ಅಪಾಯಕಾರಿಯಾಗಿ ನಡೆದಾಡಬೇಕಿದೆ.‌ ಈ ಹಿನ್ನೆಲೆಯಲ್ಲಿ ಅಂಗರಗುಂಡಿ ನಾಗರಿಕರ ನಿಯೋಗ ಸಂಚಾರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅಕ್ರಮ ಪಾರ್ಕಿಂಗ್ ಲಾರಿಗಳು ಮತ್ತು ಕಂಪೆನಿಗಳ ಮೇಲೆ  ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು.

ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗು ವುದು ಎಂದು ನಾಗರೀಕರು ಪೊಲೀಸ್  ಇಲಾಖೆಗೆ ಎಚ್ವರಿಕೆಯನ್ನೂ ನೀಡಿದ್ದಾರೆ.

ನಾಗರಿಕರ ನಿಯೋಗದಲ್ಲಿ ಸಾಮಾಜಿಕ ಹೋರಾಟಗಾರ ಬಿ.ಕೆ . ಇಮ್ತಿಯಾಝ್, ಉದ್ಯಮಿ ಶರಫುದ್ದಿನ್ ಅಂಗರಗುಂಡಿ ಮುಹಮ್ಮದ್ ಅಝರುದ್ದೀನ್, ಫರ್ಹಾನ್, ಮುಹಮ್ಮದ್ ರಫೀಕ್ ಹಿದಾಯತುಲ್ಲಾ, ಕಲಂದರ್ ಆಜ್ಮಾಲ್, ಇಸ್ಮಾಯಿಲ್ ಮೊದಲಾದವರು  ಉಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News