ರಸ್ತೆಗುಂಡಿ ಮುಚ್ಚುವ ಕಾಮಗಾರಿ ಕಳಪೆ: BBMP ವಿರುದ್ಧ ಆಕ್ರೋಶ

Update: 2022-08-29 12:37 GMT

ಬೆಂಗಳೂರು, ಆ.29: ನಗರದಲ್ಲಿ ರಸ್ತೆಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೇ ಪರಿಶೀಲಿಸಿ ಕಳಪೆ ಕಾಮಗಾರಿಯನ್ನು ಬಯಲು ಮಾಡಿದ್ದಾರೆ.

ನಗರದ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ತರಾತುರಿಯಲ್ಲಿ ಅಸಮರ್ಪಕ ಕೆಲಸ ಮಾಡಲಾಗಿದೆ. ಅದರಲ್ಲೂ ಮನಬಂದಂತೆ ಮಣ್ಣು, ಕಲ್ಲಿನ ಪುಡಿ ಸಿಂಪಡಣೆ ಮಾಡಿ ಹೋಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪರಿಶೀಲನೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಹುತೇಕ ಕಡೆ ಚರಂಡಿಗಳಿಗೆ ನೀರಿನ ಸರಾಗವಾಗಿ ಹರಿಯಲು ಇನ್‍ಲೆಟ್ ಪಾಯಿಂಟ್‍ಗಳಿಲ್ಲ, ಮನಬಂದಂತೆ ರಸ್ತೆ ಕಟಿಂಗ್ ಮಾಡಲಾಗಿದೆ. ಭಾರತೀಯ ರಸ್ತೆ ಕಾಂಗ್ರೆಸ್ ಮಾನದಂಡ(ಐಆರ್‍ಸಿ) ಅನುಸರಿಸಿಲ್ಲ. ಇಂತಹ ಕಳಪೆ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಲಿವೆ ಎಂದು ದೂರಿದ್ದಾರೆ.

ತರಾತುರಿಯಲ್ಲಿ ಬಿಬಿಯಂಪಿಯಿಂದ (BBMP) ಅಸಮರ್ಪಕ ಕೆಲಸ ಮಾಡಲಾಗಿದೆ. ರಸ್ತೆಯ ಗುಣಮಟ್ಟದ ಸಮಸ್ಯೆ ಇದೆ. ಬಹುತೇಕ ಕಡೆ ರಸ್ತೆ ಹಾಳಾಗಲು ಜಲಮಂಡಳಿ ಪೈಪ್‍ಗಳೇ ಕಾರಣ. ಬಿಬಿಎಂಪಿ ರಸ್ತೆಯ ಗುಣಮಟ್ಟ ಮಾನದಂಡಕ್ಕೆ ಅನುಗುಣವಾಗಿಲ್ಲ. ಡಾಂಬರಿನ ಗುಣಮಟ್ಟವೂ ನಿಗದಿತ ಪ್ರಮಾಣದಲ್ಲಿಲ್ಲ ಎಂದು ವ್ಯಕ್ತಿ ಆರೋಪಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News