×
Ad

ಈಜು ಸ್ಪರ್ಧೆಯಲ್ಲಿ ಚೈತನ್ಯಾಗೆ ಪದಕ

Update: 2022-08-31 16:43 IST

ಮಂಗಳೂರು : ಪುತ್ತೂರು ತಾಲೂಕಿನ ಪರ್ಲಡ್ಕದ ಡಾ. ಶಿವರಾಮ ಕಾರಂತ ಬಾಲಭವನದಲ್ಲಿ ನಡೆದ ದ.ಕ. ಜಿಲ್ಲಾ ಇಂಟರ್ ಕ್ಲಬ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಕಾರ್ಮೆಲ್ ಸ್ಕೂಲ್‌ನ 5ನೆ ತರಗತಿ ವಿದ್ಯಾರ್ಥಿನಿ ಚೈತನ್ಯಾ ಆರ್. ವಿವಿಧ ವಿಭಾಗಳಲ್ಲಿ ಹಲವು ಪದಕಗಳನ್ನು ಪಡೆದಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್ ರಂಗೇಗೌಡ- ನಯನಾ ಆರ್. ದಂಪತಿ ಪುತ್ರಿಯಾಗಿರುವ ಚೈತನ್ಯಾ ಆರ್. ಅವರು 50 ಮೀ.ಅಂಡರ್‌ವಾಟರ್ ವಿಭಾಗದಲ್ಲಿ ಪ್ರಥಮ, 100 ಮೀ.ಬ್ಯಾಕ್‌ಸ್ಟ್ರೋಕ್‌ನಲ್ಲಿ ಪ್ರಥಮ, 50 ಮೀ. ಬಟರ್‌ಫ್ಲೈನಲ್ಲಿ ದ್ವಿತೀಯ, 50 ಮೀ.ಬ್ಯಾಕ್ ಸ್ಟ್ರೋಕ್‌ನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News