×
Ad

ಉಜಿರೆ; ಟಯರ್ ಅಂಗಡಿಯಲ್ಲಿ‌ ಬೆಂಕಿ‌ ಅನಾಹುತ

Update: 2022-08-31 16:57 IST

ಬೆಳ್ತಂಗಡಿ : ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಅನುಗ್ರಹ ಆಂಗ್ಲ ಮಾದ್ಯಮ ಶಾಲೆಯ ಸಮೀಪದ ಅನಾರ್ ಟಯರ್ ಅಂಗಡಿಯಲ್ಲಿ‌ ಬೆಂಕಿ‌ ಅನಾಹುತ ಸಂಭವಿಸಿದೆ.

ಬುಧವಾರ ಅಪರಾಹ್ನದ ವೇಳೆಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಗೆ ಸ್ಪಷ್ಟವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ರಾಜೀವ್ ಅನಾರ್ ಮಾಲಕತ್ವದ ಅಂಗಡಿಯಲ್ಲಿ ಬೆಂಕಿ‌ ಅನಾಹುತ ಸಂಭವಿಸಿದ್ದು, ಅಂಗಡಿ‌ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಪಕ್ಕದಲ್ಲಿದ್ದ ಅಂಗಡಿಗಳಿಗೂ‌ ಬೆಂಕಿ‌ ತಗುಲಿ‌ದೆ ಎನ್ನಲಾಗಿದ್ದು, ಅಗ್ನಿಶಾಮಕ ದಳದ‌ ಸಿಬ್ಬಂದಿ‌ ಬಂದು ಸ್ಥಳೀಯರ ಸಹಕಾರದೊಂದಿಗೆ  ಬೆಂಕಿ‌ ನಂದಿಸುತ್ತಿದ್ದಾರೆ. ಯಾವುದೇ ಪ್ರಾಣಹಾನಿ‌ ಸಂಭವಿಸಿಲ್ಲ. ಟಯರ್ ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News