ಆಲ್ ಇಂಡಿಯಾ ಹೇರ್ ಆ್ಯಂಡ್ ಬ್ಯೂಟಿ ಎಸೋಸಿಯೇಷನ್ ದ.ಕ.ಜಿಲ್ಲಾಧ್ಯಕ್ಷರಾಗಿ ಮರ್ಸಿ ವೀಣಾ ಡಿಸೋಜಾ
Update: 2022-09-01 08:50 IST
ಮಂಗಳೂರು: ಆಲ್ ಇಂಡಿಯಾ ಹೇರ್ ಆ್ಯಂಡ್ ಬ್ಯೂಟಿ ಎಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲಾ ನೂತನ ಅಧ್ಯಕ್ಷರಾಗಿ ಮಂಗಳೂರಿನ ಮರ್ಸಿ ಬ್ಯೂಟಿ ಅಕಾಡಮಿಯ ಸಂಸ್ಥಾಪಕರಾದ ಮರ್ಸಿ ವೀಣಾ ಡಿಸೋಜಾ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಸೈಂಟ್ ಸೆಬೆಸ್ಟಿನ್ ಚರ್ಚ್ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಮರ್ಸಿ ವೀಣಾ ಡಿಸೋಜಾ ಕಳೆದ 15 ವರ್ಷಗಳಿಂದ ಮಂಗಳೂರಿನಲ್ಲಿ ಅಕಾಡಮಿ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದು, ಹಲವಾರು ತರಬೇತಿ ಕೇಂದ್ರಗಳನ್ನು ಆಯೋಜಿಸುತ್ತಾ ನೂರಾರು ಮಂದಿಗೆ ಹೇರ್ ಆ್ಯಂಡ್ ಬ್ಯೂಟಿ ಗೆ ಸಂಬಂಧಿಸಿದ ಶಿಕ್ಷಣವನ್ನು ನೀಡಿದ್ದಾರೆ. ಇವರ ಸಂಸ್ಥೆಯ ಮೂಲಕ ಕ್ಯಾನ್ಸರ್ ಪೀಡಿತರಿಗೆ ಉಚಿತ ಹೇರ್ ವಿಗ್ ಗಳನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.