×
Ad

ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆ: ಆಸ್ಪತ್ರೆಗೆ ಸಾಗಿಸಲಾಗದೆ ಮನೆಯಲ್ಲೇ ವೃದ್ಧ ಮೃತ್ಯು

Update: 2022-09-01 18:51 IST

ಬೆಂಗಳೂರು, ಸೆ.1: ಕಳೆದ ಮೂರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆ ನೀರಿನಿಂದ ವೃದ್ಧರೊಬ್ಬರು ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಮನಕಲಕುವ ಘಟನೆ ವರದಿಯಾಗಿದೆ. 

ಇಲ್ಲಿನ ಮಹದೇವಪುರದ ರೇನ್‍ಬೋ ಲೇಔಟ್‍ನಲ್ಲಿ ಪ್ರವಾಹದಂತೆ ಪರಿಸ್ಥಿತಿ ನಿರ್ಮಾಣ ಆಗಿದ್ದ ಕಾರಣ 86 ವರ್ಷದ ಶ್ರೀನಿವಾಸ ರಾಮರಾವ್ ಅವರು ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಡರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಹಲವು ಬಾರಿ ಆ್ಯಂಬುಲೆನ್ಸ್ ಗಾಗಿ ಸಂಪರ್ಕಿಸಿದರೂ, ಅವರು ನೀರಿನ ಕಾರಣದಿಂದ ಮನೆಗೆ ತಲುಪಲಿಲ್ಲ ಎಂದು ಹೇಳಲಾಗುತ್ತಿದೆ. ಆನಂತರ, ಸ್ಥಳೀಯರು ಮೃತದೇಹವನ್ನು ಮನೆಯಿಂದ ಹೊರ ತರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬಿಜೆಪಿ ಶಾಸಕಅರವಿಂದ ಲಿಂಬಾವಳಿ ಅವರು 2008ರಿಂದ ಅಧಿಕಾರಿದಲ್ಲಿದ್ದರೂ, ಈ ಪ್ರದೇಶಗಳ ಸಮಸ್ಯೆಗಳಿಗೆ ಯಾವುದೇ ಒತ್ತು ನೀಡಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News