ಬೆಂಗಳೂರು: ಮಳೆ ಬಂದಾಗ ಅಂಡರ್‌ಪಾಸ್‌ನಲ್ಲಿ ವಾಹನ ನಿಲ್ಲಿಸಿದರೆ ದಂಡ

Update: 2022-09-01 15:57 GMT

ಬೆಂಗಳೂರು, ಸೆ.1: ಮಳೆ ಸಂದರ್ಭದಲ್ಲಿ ಕೆಳ ಸೇತುವೆಗಳಲ್ಲಿ ವಾಹನ ನಿಲ್ಲಿಸಿದರೆ ದಂಡವಿಧಿಸುವುದಾಗಿ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಮುಖವಾಗಿ ನಾಯಂಡಹಳ್ಳಿ, ವಿಂಡ್ಸರ್ ಮ್ಯಾನರ್ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಮಳೆ ಸಂದರ್ಭದಲ್ಲಿ ಕೆಳಸೇತುವೆಗಳಲ್ಲಿ ವಾಹನ ನಿಲ್ಲಿಸಲಾಗುತ್ತಿದ್ದು, ಇದರಿಂದ ಸಂಚಾರ ಜತೆಗೆ, ವಾಹನಗಳಿಂದ ಅಪಘಾತ ವರದಿಯಾಗಿವೆ.

ಹೀಗಾಗಿ, ಕೆಳಸೇತುವೆಗಳಲ್ಲಿ ವಾಹನ ನಿಲ್ಲಿಸದಂತೆ ಸೂಚನೆ ನೀಡಲಾಗಿದೆ. ಕೆಳಸೇತುವೆಯಲ್ಲಿ ಗಾಡಿ ನಿಲ್ಲಿಸಿ ಸಂಚಾರ ದಟ್ಟಣೆಗೆ ಕಾರಣರಾದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News