×
Ad

ಅಲ್-ಇಹ್ಸಾನ್ ಕುಸ್ತಿ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Update: 2022-09-02 18:01 IST

ಕಾಪು, ಸೆ.2: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಜ್ಜರ ಕಾಡು ವಿವೇಕಾನಂದ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಜರಗಿದ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದ 14ರ ವಯೋಮಿತಿ ಮತ್ತು 17ರ ವಯೋಮಿತಿಯಲ್ಲಿ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದಲ್ಲಿರುವ ಮೂಳೂರು ಅಲ್-ಇಹ್ಸಾನ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ ಪಡೆಯುವುದರೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತ ತಂಡದೊಂದಿಗೆ ಶಾಲಾ ಪ್ರಾಂಶುಪಾಲ ಕೆ.ಎಸ್ ಹಬೀಬುರ‌್ರಹ್ಮಾನ್, ಉಪ ಪ್ರಾಂಶುಪಾಲೆ ಅಫ್ರೀನ್ ತಬ್ರೀಝ್ ಖಾನ್, ಮುಖ್ಯೋಪಾದ್ಯಾಯಿನಿ ಯರಾದ ಮಮತಾ ಪೂಜಾರಿ, ಸೈಯದ್ ಶಬಾನಾ, ದೈಹಿಕ ಶಿಕ್ಷಣ ಶಿಕ್ಷಕರಾದ ಬಶೀರ್ ಎಂ., ಸದ್ದಾಮ್ ಹುಸೇನ್, ಸುಮನಾ ಕಿಶೋರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News