ಬ್ರಹ್ಮಗಿರಿ; ನಾಯರ್‌ಕೆರೆಯ ಫಿರೋಝ್ ಮನ್ನಾ ನಿಧನ
Update: 2022-09-03 18:58 IST
ಉಡುಪಿ, ಸೆ.3: ಬ್ರಹ್ಮಗಿರಿ ನಾಯರ್‌ಕೆರೆಯ ಹಾಶಿಮಿ ಮಸೀದಿಯ ಕಾರ್ಯದರ್ಶಿ ಫಿರೋಝ್ ಮನ್ನಾ(67) ಹೃದಯಾಘಾತದಿಂದ ಇಂದು ಮಧ್ಯಾಹ್ನ ವೇಳೆ ನಿಧನರಾದರು.
ನೇಜಾರು ನಿವಾಸಿಯಾಗಿದ್ದ ಅವರು, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಫಿರೋಝ್ ಅವರ ಅಂತ್ಯಕ್ರಿಯೆಯು ನಾಳೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.