×
Ad

‘ಸಾಮರಸ್ಯ ಮಂಗಳೂರು’ ವತಿಯಿಂದ ಚೌತಿ ಪರ್ಬ ಆಚರಣೆ

Update: 2022-09-03 22:32 IST

ಮಂಗಳೂರು, ಸೆ.3: ಸಾಮರಸ್ಯ ಮಂಗಳೂರು’ ಇದರ ವತಿಯಿಂದ ತುಳು ಸಾಹಿತ್ಯ ಅಕಾಡಮಿಯ ಸಹಕಾರದಲ್ಲಿ ನಗರದ ತುಳು ಭವನದಲ್ಲಿ ‘ಚೌತಿ ಪರ್ಬ’ವನ್ನು ಇತ್ತೀಚೆಗೆ ವಿಶಿಷ್ಟ ಶೈಲಿಯಲ್ಲಿ ಆಚರಿಸಲಾಯಿತು.

ಸರ್ವ ಧರ್ಮಗಳ ಬಂಧುಗಳನ್ನು ಆಹ್ವಾನಿಸಿ ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಿ, ಬಗೆ ಬಗೆ ತಿನಿಸುಗಳ ಸಾಮರಸ್ಯದ ಸಹ ಭೋಜನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ದೈಜಿವಲ್ಡ್ ಗ್ರೂಪ್ ಆಫ್ ಮೀಡಿಯಾದ ಸ್ಥಾಪಕ ವಾಲ್ಟರ್ ನಂದಳಿಕೆ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಯಕ್ಷಗಾನ ಕಲಾವಿದ ಜಬ್ಬಾರ್ ಸಮೊ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೋಡಿಯಾಲ್ ಖಬರ್ ಪತ್ರಿಕೆಯ ಪ್ರಧಾನ ಸಂಪಾದಕ ವೆಂಕಟೇಶ್ ಬಾಳಿಗಾ, ಟೈಲರ್ಸ್ ಅಸೋಸಿಯೇಶನ್ ಉರ್ವ ವಲಯದ ಅಧ್ಯಕ್ಷ ಉದಯ್ ಬಂಗೇರಾ, ಶಕ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸಂಘಟಕರಾದ ಶಬಾನ ಭಾನು, ಸರಿತಾ, ಸುಜಾತಾ, ಉರ್ವ ವಲಯ ಕುರುಬರ ಸಂಘದ ಅಧ್ಯಕ್ಷ ಚಂದ್ರು, ಕುರಿಯಪ್ಪ, ರಾಜಹುಲಿ ಮಲ್ಲಿಕಾರ್ಜುನ್, ಹರೀಶ್ ಕುಮಾರ್, ಎಂ.ಜಿ.ಹೆಗ್ಡೆ, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಕೆ. ಆಶ್ರಫ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಶ್ರೀಕ್ಷೇತ್ರ ಕುದ್ರೋಳಿ ಇದರ ಕೋಶಾಧಿಕಾರಿ ಪದ್ಮರಾಜ್, ಶಿರಡಿ  ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್ ಕುಮಾರ್ ದಾಸ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಮನಪಾ ಸದಸ್ಯರಾದ ಝೀನತ್  ಶಂಶುದ್ದೀನ್, ನವೀನ್ ಡಿಸೋಜ, ಸಬಿತಾ ಮಿಸ್ಕಿತ್, ಕೇಶವ ಮರೋಳಿ, ನಿತ್ಯಾನಂದ ಶೆಟ್ಟಿ, ಶೆರಿಲ್ ಲೋನಾ, ಪ್ರವೀಣ್‌ಚಂದ್ರ ಆಳ್ವ , ಎ.ಸಿ. ವಿನಯರಾಜ್, ಮಲ್ಲಿಕಾ ಪಕ್ಕಳ, ಕಲಾ ಡಿ. ರಾವ್,ಗೀತಾ ಪ್ರವೀಣ್, ಉದಯ ಆಚಾರ್, ರಘುರಾಜ್ ಕದ್ರಿ,ಲಾರೆನ್ಸ್ ಡಿಸೋಜ ಉಪಸ್ಥಿತರಿದ್ದರು.

‘ಸಾಮರಸ್ಯ ಮಂಗಳೂರು’ ಅಧ್ಯಕ್ಷೆ ಮಂಜುಳಾ ನಾಯಕ ಸ್ವಾಗತಿಸಿದರು. ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಚೇತನ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News