ದೇಶದಲ್ಲಿ ಶೇ.11 ಮಕ್ಕಳ ಜನನ ನೋಂದಣಿಯೇ ಆಗಿಲ್ಲ!

Update: 2022-09-04 04:20 GMT

ಭಾರತದಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪೈಕಿ ಶೇ. 89 ಮಕ್ಕಳ ಜನನವು ಸರಕಾರದ ಅಧಿಕೃತ ಕಚೇರಿಗಳಲ್ಲಿ ನೋಂದಾವಣೆಗೊಂಡಿದೆ. ಅಂದರೆ, ದೇಶದಲ್ಲಿ ಶೇ. 11 ಮಕ್ಕಳ ಜನನವು ನೋಂದಣಿಯೇ ಆಗಿಲ್ಲ!ಅದೇ ವೇಳೆ, ಜನನ ಪ್ರಮಾಣಪತ್ರಗಳನ್ನು ಹೊಂದಿರುವ ಮಕ್ಕಳ ಪ್ರಮಾಣ ಶೇ. 75 ಮಾತ್ರ. ಜನನ ನೋಂದಾವಣೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಪ್ರಮಾಣ ಸಮಾನವಾಗಿದೆ. ನಗರ ಪ್ರದೇಶಗಳ ಮಕ್ಕಳ ಪೈಕಿ ಶೇ. 93 ಮಕ್ಕಳ ಜನನ ನೋಂದಾವಣೆಯಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ. 88 ಮಕ್ಕಳ ಜನನ ದಾಖಲಾಗಿದೆ ಎಂದು ಇತ್ತೀಚೆಗೆ ಬಿಡುಗಡೆಗೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್‌ಎಫ್‌ಎಚ್‌ಎಸ್-5) ತಿಳಿಸಿದೆ.
ಲಕ್ಷದ್ವೀಪ ಮತ್ತು ಗೋವಾಗಳಲ್ಲಿ ಜನನ ದಾಖಲಾತಿಯು ಶೇ. 100 ಆಗಿದ್ದರೆ, 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅದು ಶೇ. 95 ಅಥವಾ ಅದಕ್ಕಿಂತಲೂ ಹೆಚ್ಚಾಗಿದೆ. ಬಿಹಾರ (ಶೇ. 76), ಜಾರ್ಖಂಡ್ (ಶೇ. 74) ಮತ್ತು ನಾಗಾಲ್ಯಾಂಡ್ (ಶೇ. 73) ರಾಜ್ಯಗಳಲ್ಲಿ ಈ ಪ್ರಮಾಣ ಶೇ. 80ಕ್ಕಿಂತಲೂ ಕಡಿಮೆಯಾಗಿದೆ.
ಎನ್‌ಎಫ್‌ಎಚ್‌ಎಸ್-4 (2015-16) ಮತ್ತು ಎನ್‌ಎಫ್‌ಎಚ್‌ಎಸ್-5 (2019-21)ರ ನಡುವಿನ ಅವಧಿಯಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಜನನ ನೋಂದಣಿಯು ಶೇ. 80ರಿಂದ ಶೇ. 89ಕ್ಕೆ ಏರಿದೆ. ಈ ಅವಧಿಯಲ್ಲಿ ಜಾರ್ಖಂಡ್, ಬಿಹಾರ, ಉತ್ತರಪ್ರದೇಶ ಮತ್ತು ನಾಗಾಲ್ಯಾಂಡ್‌ಗಳಲ್ಲಿ ದಾಖಲಾಗಿರುವ ಜನನ ಪ್ರಮಾಣದಲ್ಲಿ ಶೇ. 60ಕ್ಕಿಂತಲೂ ಅಧಿಕ ಏರಿಕೆಯಾಗಿದೆ.
ಶೇ. 29 ಜನರ ಸಾವು ದಾಖಲಾಗುವುದಿಲ್ಲ!


ಎನ್‌ಎಫ್‌ಎಚ್‌ಎಸ್-5 ಸಮೀಕ್ಷೆಗಿಂತ ಮೊದಲಿನ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ದಾಖಲಾಗಿರುವ ಮರಣ ಪ್ರಮಾಣ ಶೇ. 71. 0-4 ವಯೋಗುಂಪಿನ ಮರಣ ದಾಖಲಾತಿ ಪ್ರಮಾಣವು ಶೇ. 51. ಆದರೆ, 25-34 ವಯೋಗುಂಪಿನ ಮರಣ ದಾಖಲಾತಿ ಪ್ರಮಾಣವು ಶೇ. 76 ಆಗಿತ್ತು. ಅದೇ ವೇಳೆ, 35 ಮತ್ತು ಅದಕ್ಕಿಂತ ಹೆಚ್ಚಿನ ವರ್ಷದ ವ್ಯಕ್ತಿಗಳ ಸಾವಿನ ದಾಖಲಾತಿ ಪ್ರಮಾಣವು ಶೇ. 75 ಆಗಿತ್ತು. ಅಂದರೆ, ಒಟ್ಟಾರೆ ಶೇ. 29 ಜನರ ಸಾವು ದಾಖಲಾಗುವುದಿಲ್ಲ.
ಮರಣ ದಾಖಲಾತಿಯು ನಗರಗಳಲ್ಲಿ (ಶೇ. 83) ಹೆಚ್ಚಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ (ಶೇ. 66) ಕಡಿಮೆಯಾಗಿದೆ. ಪುರುಷರ ಮರಣ ದಾಖಲಾತಿ (ಶೇ. 75)ಯು ಹೆಚ್ಚಾಗಿದ್ದರೆ, ಮಹಿಳೆಯರ ಮರಣ ದಾಖಲಾತಿಯು (ಶೇ. 66) ಕಡಿಮೆಯಾಗಿದೆ.
ಸಂಪತ್ತು ಹೆಚ್ಚಿದಂತೆಲ್ಲಾ ಮರಣ ದಾಖಲಾತಿ ಪ್ರಮಾಣವೂ ಹೆಚ್ಚುತ್ತದೆ. ಸಂಪತ್ತಿನ ಪ್ರಮಾಣವನ್ನು ಐದು ಭಾಗಗಳಾಗಿ ವಿಂಗಡಿಸಿದರೆ, ಗರಿಷ್ಠ ಸಂಪತ್ತು ಹೊಂದಿರುವ ಮೇಲಿನ ಭಾಗದ ವ್ಯಾಪ್ತಿಗೆ ಬರುವ ಜನರಲ್ಲಿ ಮರಣ ದಾಖಲಾತಿ ಪ್ರಮಾಣ ಗರಿಷ್ಠ (ಶೇ. 87) ಆದರೆ, ಅತ್ಯಂತ ಕಡಿಮೆ ಸಂಪತ್ತು ಹೊಂದಿರುವ (ಅಥವಾ ಹೊಂದಿರದ) ಜನರನ್ನು ಹೊಂದಿರುವ ತಳ ಭಾಗದಲ್ಲಿ ಮರಣ ದಾಖಲಾತಿ ಪ್ರಮಾಣವು ಶೇ. 52 ಆಗಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಬಿಹಾರ (ಶೇ. 36), ಅರುಣಾಚಲ ಪ್ರದೇಶ (ಶೇ. 37) ಮತ್ತು ನಾಗಾಲ್ಯಾಂಡ್ (ಶೇ. 39)ಗಳಲ್ಲಿ ಮರಣ ನೋಂದಣಿ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. 
ಸಂಪತ್ತು ಹಂಚಿಕೆಯನ್ನು ಕನಿಷ್ಠದಿಂದ ಗರಿಷ್ಠದವರೆಗೆ ಐದು ಭಾಗಗಳಲ್ಲಿ ವಿಂಗಡಿಸಿದರೆ, ಪ್ರತೀ ವಿಭಾಗದಲ್ಲಿ ಯಾವ ಧರ್ಮದ ಕುಟುಂಬಗಳು ಎಷ್ಟು ಪ್ರಮಾಣದಲ್ಲಿ ಇವೆ ಎನ್ನುವುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ಅಂದಾಜು ಮಾಡಿದೆ. ಜೈನರ ಪೈಕಿ ಶೇ. 80.1 ಕುಟುಂಬಗಳು ಅತ್ಯಧಿಕ ಸಂಪತ್ತು ವಿಭಾಗದಲ್ಲಿ ಬಂದರೆ, ಕನಿಷ್ಠ ಆದಾಯ ಗುಂಪಿನಲ್ಲಿ ಹಿಂದೂ ಕುಟುಂಬಗಳು ಹೆಚ್ಚಿನ (ಶೇ. 20.5) ಸಂಖ್ಯೆಯಲ್ಲಿ ಇವೆ.
ಹಿಂದೂಗಳ ಪೈಕಿ, ಕನಿಷ್ಠ ಸಂಪತ್ತು ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಅತ್ಯಧಿಕ ಕುಟುಂಬಗಳು (ಶೇ. 46.3 ) ಬರುತ್ತವೆ. ಇದೇ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿಗಳಿಗೆ (ಶೇ. 25.5) ಸೇರಿದ ಕುಟುಂಬಗಳಿವೆ.ಎಷ್ಟು ಮನೆಗಳಿಗೆ ವಿದ್ಯುತ್ ಇಲ್ಲ?

ದೇಶದಲ್ಲಿ ಶೇ. 96.5 ಮನೆಗಳು ವಿದ್ಯುತ್ ಹೊಂದಿದ್ದು, ಶೇ. 3.5 ಮನೆಗಳು ಇನ್ನೂ ವಿದ್ಯುತ್ ನೋಡಿಲ್ಲ. ನಗರ ಪ್ರದೇಶಗಳಲ್ಲಿ ಶೇ. 99 ಮನೆಗಳಲ್ಲಿ ವಿದ್ಯುತ್ ಇದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ. 95.3 ಮನೆಗಳು ವಿದ್ಯುತ್ ಹೊಂದಿವೆ. ಅಂದರೆ ನಗರ ಪ್ರದೇಶದ ಶೇ. 1 ಮನೆಗಳು ಮತ್ತು ಗ್ರಾಮೀಣ ಪ್ರದೇಶಗಳ ಶೇ. 4.7 ಮನೆಗಳು ವಿದ್ಯುತ್‌ನಿಂತ ವಂಚಿತವಾಗಿವೆ.

ಯಾರಲ್ಲಿ ಸಂಪತ್ತು ಅತ್ಯಧಿಕ? ಯಾವ ಕುಟುಂಬಗಳಲ್ಲಿ ಕನಿಷ್ಠ?

ಸಂಪತ್ತು ಹಂಚಿಕೆಯನ್ನು ಕನಿಷ್ಠದಿಂದ ಗರಿಷ್ಠದವರೆಗೆ ಐದು ಭಾಗಗಳಲ್ಲಿ ವಿಂಗಡಿಸಿದರೆ, ಪ್ರತೀ ವಿಭಾಗದಲ್ಲಿ ಯಾವ ಧರ್ಮದ ಕುಟುಂಬಗಳು ಎಷ್ಟು ಪ್ರಮಾಣದಲ್ಲಿ ಇವೆ ಎನ್ನುವುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ಅಂದಾಜು ಮಾಡಿದೆ. ಜೈನರ ಪೈಕಿ ಶೇ. 80.1 ಕುಟುಂಬಗಳು ಅತ್ಯಧಿಕ ಸಂಪತ್ತು ವಿಭಾಗದಲ್ಲಿ ಬಂದರೆ, ಕನಿಷ್ಠ ಆದಾಯ ಗುಂಪಿನಲ್ಲಿ ಹಿಂದೂ ಕುಟುಂಬಗಳು ಹೆಚ್ಚಿನ (ಶೇ. 20.5) ಸಂಖ್ಯೆಯಲ್ಲಿ ಇವೆ.
ಹಿಂದೂಗಳ ಪೈಕಿ, ಕನಿಷ್ಠ ಸಂಪತ್ತು ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಅತ್ಯಧಿಕ ಕುಟುಂಬಗಳು (ಶೇ. 46.3 ) ಬರುತ್ತವೆ. ಇದೇ ವಿಭಾಗದಲ್ಲಿ ಎರಡನೇಸ್ಥಾನದಲ್ಲಿ ಪರಿಶಿಷ್ಟ ಜಾತಿಗಳಿಗೆ (ಶೇ. 25.5) ಸೇರಿದ ಕುಟುಂಬಗಳಿವೆ.     

          

        

Writer - ಆರ್.ಎಚ್.

contributor

Editor - ಆರ್.ಎಚ್.

contributor

Similar News