×
Ad

ನಾನು ಟೆಸ್ಟ್ ನಾಯಕತ್ವ ತೊರೆದಾಗ ಧೋನಿ ಮಾತ್ರ ಸಂದೇಶ ಕಳುಹಿಸಿದ್ದರು: ವಿರಾಟ್ ಕೊಹ್ಲಿ

Update: 2022-09-05 11:50 IST

ದುಬೈ: “ನಾನು ಟೆಸ್ಟ್ ನಾಯಕತ್ವವನ್ನು ತೊರೆದಾಗ, ನಾನು ಒಬ್ಬ ವ್ಯಕ್ತಿಯಿಂದ ಮಾತ್ರ ಸಂದೇಶವನ್ನು ಸ್ವೀಕರಿಸಿದ್ದೇನೆ ಹಾಗೂ ನಾನು ಈ ಹಿಂದೆ ಆ ವ್ಯಕ್ತಿಯೊಂದಿಗೆ ಆಡಿದ್ದೇನೆ. ಆ ವ್ಯಕ್ತಿಯೇ ಎಂ.ಎಸ್. ಧೋನಿ(MS Dhoni). ಧೋನಿಯವರನ್ನು ಬಿಟ್ಟು ಬೇರೆ ಯಾರೂ ನನಗೆ ಮೆಸೇಜ್ ಮಾಡಲಿಲ್ಲ. ಅನೇಕ ಜನರಲ್ಲಿ ನನ್ನ ಮೊಬೈಲ್ ಸಂಖ್ಯೆ ಇದೆ.  ಟಿವಿಯಲ್ಲಿ ನನಗೆ ಸಲಹೆಗಳನ್ನು ನೀಡುವ ಅನೇಕ ಜನರಿದ್ದಾರೆ. ಎಂಎಸ್ ಧೋನಿ ಮಾತ್ರ ನನಗೆ ಸಂದೇಶ ಕಳುಹಿಸಿದ್ದರು, ಅನೇಕ ಜನರ ಬಳಿ ನನ್ನ ಮೊಬೈಲ್ ಸಂಖ್ಯೆ ಇದ್ದರೂ ಕೂಡ  ಅವರು ನನಗೆ ಸಂದೇಶ ಕಳುಹಿಸಲಿಲ್ಲ”ಎಂದು ಪಾಕಿಸ್ತಾನದ ವಿರುದ್ದ ರವಿವಾರ ನಡೆದ ಏಶ್ಯಕಪ್ ನ ಸೂಪರ್-4  ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli )ಹೇಳಿದರು.

"ನಾನು ಅವರಿಂದ ಏನನ್ನೂ ಬಯಸುವುದಿಲ್ಲ ಹಾಗೂ ಅವರು ನನ್ನಿಂದ ಏನನ್ನೂ ಬಯಸುವುದಿಲ್ಲ. ನಾನು ಅವರಿಂದ ಎಂದಿಗೂ ಅಸುರಕ್ಷಿತನಾಗಿರಲಿಲ್ಲ. ನಾನು ಯಾರಿಗಾದರೂ ಏನನ್ನಾದರೂ ಹೇಳಲು ಬಯಸಿದರೆ, ನಾನು ವೈಯಕ್ತಿಕವಾಗಿ ಅವರನ್ನು ಸಂಪರ್ಕಿಸುತ್ತೇನೆ. ನೀವು ಸಹಾಯ ಮಾಡಲು ಬಯಸಿದ್ದರೂ ಸಹ ನೀವು ಟಿವಿ ಅಥವಾ ಇಡೀ ಪ್ರಪಂಚದ ಮುಂದೆ ನನಗೆ ಸಲಹೆಯನ್ನು ನೀಡಲು ಬಯಸಿದರೆ, ಅದು ನನಗೆ ಹೆಚ್ಚು ಮೌಲ್ಯವೆಂದು ಎನಿಸಿಕೊಳ್ಳುವುದಿಲ್ಲ. ದೇವರು ನಿಮಗೆ ಎಲ್ಲವನ್ನೂ ನೀಡುತ್ತಾನೆ, ದೇವರು ಮಾತ್ರ ನಿಮಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತಾನೆ ಹಾಗೂ  ಎಲ್ಲವೂ ಅವನ ಕೈಯಲ್ಲಿದೆ" ಎಂದು ಕೊಹ್ಲಿ ಹೇಳಿದರು.

ವಿಶ್ವಕಪ್ ನಂತರ ಕೊಹ್ಲಿ ಟಿ-20 ನಾಯಕತ್ವದಿಂದ ಕೆಳಗಿಳಿದಿದ್ದರು ಹಾಗೂ  ಆಯ್ಕೆದಾರರು ಸೀಮಿತ ಓವರ್ ಕ್ರಿಕೆಟಿಗೆ ಒಂದೇ ನಾಯಕನನ್ನು ಬಯಸಿದ್ದರಿಂದ ಅದೇ ವರ್ಷದಲ್ಲಿ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ನಂತರ ಕೊಹ್ಲಿ ಟೆಸ್ಟ್ ನಾಯಕತ್ವದಿಂದಲೂ ಕೆಳಗಿಳಿದಿದ್ದರು.

ಈಗ ನಡೆಯುತ್ತಿರುವ ಏಶ್ಯಕಪ್  ಪಂದ್ಯಾವಳಿಯಲ್ಲಿ ಕೊಹ್ಲಿ ಅವರು ಪೂರ್ಣ ಫಾರ್ಮ್‌ಗೆ ಮರಳಿದ್ದಾರೆ. ಇದುವರೆಗಿನ ಮೂರು ಪಂದ್ಯಗಳಲ್ಲಿ ಬಲಗೈ ಬ್ಯಾಟರ್ ಒಟ್ಟು 154 ರನ್ ಗಳಿಸಿದ್ದಾರೆ. ರವಿವಾರ ಪಾಕಿಸ್ತಾನ ವಿರುದ್ಧ ಸೂಪರ್ 4 ಹಂತದಲ್ಲಿ 60 ರನ್‌ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News