ಸೆ.9ರಂದು ಮದರ್ ತೆರೇಸಾ 25ನೆ ಸಂಸ್ಮರಣಾ ದಿನಾಚರಣೆ

Update: 2022-09-06 11:09 GMT

ಮಂಗಳೂರು, ಸೆ.6: ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆ ದ.ಕ. ಜಿಲ್ಲಾಮಟ್ಟದ ವಿಚಾರ ಸಂಕಿರಣ ಸೆ.9ರಂದು ಸಂಜೆ 3ಕ್ಕೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ತಿಳಿಸಿದ್ದಾರೆ.

ನಗರದಲ್ಲಿ  ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚ್ಚನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಜ. ಎಚ್.ಎನ್. ನಾಗಮೋಹನ್‍ ದಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಿಂತಕರಾದ ಪಲ್ಲವಿ ಇಡೂರು ವಿಷಯ ಮಂಡಿಸಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಬಿ. ಸಲ್ಡಾನಾ, ಯುವಜನ ಚಳುವಳಿಯ ರಾಜ್ಯ ನಾಯಕ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು.

ಸಂಜೆ 5.30ಕ್ಕೆ ಏಕತಾರಿ ಹಾಡುಗಾರ ನಾಗ ಮಣಿ ನಾಲ್ಕೂರು, ಮೈಮ್ ರಾಮ್‍ದಾಸ್, ಮೇಘನಾ ಕುಂದಾಪುರ, ಮಹಮ್ಮದ್ ಇಸ್ಮಾಯಿಲ್ ಅವರಿಂದ ಪ್ರೀತಿಯ ಸಿಂಚನ ಸೌಹಾರ್ದ ಗಾಯನ ನಡೆಯಲಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿರುವ ಪ್ರಬಂಧ ಸ್ಪರ್ಧೆಗೆ 520 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ಕೆಲವರು ಬಹಳ ಅದ್ಭುತವಾಗಿ ಬರೆದಿದ್ದಾರೆ. ಯುವಜನರಿಗೆ ಸೂಕ್ತ ವೇದಿಕೆ ಕಲ್ಪಿಸಿದರೆ ದ್ವೇಷದ ಕಡೆಯಿಂದ ಪ್ರೀತಿಯ ಕಡೆಗೆ ಬರುತ್ತಾರೆ ಎಂಬುದು ಈ ಪ್ರಬಂಧಗಳ ಬರವಣಿಗೆಯಿಂದ ಅವರ ಮನಸ್ಥಿತಿ ಅರ್ಥವಾಗುತ್ತದೆ ಎಂದು ಎಂ.ಜಿ. ಹೆಗಡೆ ಅಭಿಪ್ರಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಕಾರ್ಯಕ್ರಮ ಸಂಯೋಜಕ ರೂಪೇಶ್ ಮಾಡ್ತಾ, ಮುಖಂಡ ಸುಶೀಲ್ ನೊರೊನ್ಹಾ, ಕ್ಯಾಥೋಲಿಕ್ ಸಭಾ ಅಧ್ಯಕ್ಷ ಸ್ಟ್ಯಾನ್ಲಿ ಲೋಬೋ, ಮುಖಂಡರಾದ ಯಶವಂತ ಮರೋಳಿ, ಕೆ. ಅಶ್ರಫ್, ಎಂ. ದೇವದಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News