ವಾರ್ತಾಭಾರತಿ ಹೆಸರಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿ, ಸುಳ್ಳು ಸುದ್ದಿ ಪ್ರಸಾರ: ಎಫ್ ಐ ಆರ್ ದಾಖಲು

Update: 2022-09-06 12:07 GMT

ಮಂಗಳೂರು: ವಾರ್ತಾಭಾರತಿ ಹೆಸರಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಪ್ರಕರಣದಲ್ಲಿ ನಗರದ ಸೈಬರ್ ಠಾಣೆಯಲ್ಲಿ ಮಂಗಳವಾರ ಎಫ್ ಐ ಆರ್ ದಾಖಲಾಗಿದೆ. 

ವಾರ್ತಾಭಾರತಿ ಮಾಧ್ಯಮ ಸಮೂಹದ ಕನ್ನಡ ವೆಬ್ ಸೈಟ್ varthabharati.in ಹೆಸರಲ್ಲಿ ಕಾರ್ಯಾಚರಿಸುತ್ತಿದೆ. ಇದೀಗ ವಾರ್ತಾಭಾರತಿ ವೆಬ್ ಸೈಟ್ ನ ವ್ಯಾಪಕ ಜನಪ್ರಿಯತೆ ಹಾಗು ವಿಶ್ವಾಸಾರ್ಹತೆಯನ್ನು ದುರುಪಯೋಗಪಡಿಸಿಕೊಂಡು ಹೆಸರಿನ ಸ್ಪೆಲ್ಲಿಂಗ್ ನಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ವೆಬ್ ಸೈಟ್ ನ ಹೆಸರು ವಾರ್ತಾಭಾರತಿ ವೆಬ್ ಸೈಟ್ ಎಂಬಂತೆಯೇ ಕಾಣುವ ಹಾಗೆ ನಕಲಿ ವೆಬ್ ಸೈಟ್ ಒಂದನ್ನು ದುಷ್ಕರ್ಮಿಗಳು ಸೃಷ್ಟಿಸಿರುವುದು  ಸೋಮವಾರ ಸೆಪ್ಟೆಂಬರ್ 5, 2022 ರಂದು ತಿಳಿದು ಬಂದಿತ್ತು.  

ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್ ಅವರಿಗೆ ಸೋಮವಾರ ರಾತ್ರಿ  ದೂರು ಸಲ್ಲಿಸಿತ್ತು. ಇದೀಗ ಆಯುಕ್ತರ ಸೂಚನೆ ಪ್ರಕಾರ ನಗರದ ಸೈಬರ್, ಆರ್ಥಿಕ ಹಾಗು ನಾರ್ಕೋಟಿಕ್ಸ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಓದುಗರೇ, ನಕಲಿ ವೆಬ್ ಸೈಟ್ ಬಗ್ಗೆ ಎಚ್ಚರ ! 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News