×
Ad

ಎತ್ತ ನೋಡಿದರೂ ನೀರು, ಪ್ರವಾಹ: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಕಿಡಿ

Update: 2022-09-06 19:08 IST

ಬೆಂಗಳೂರು, ಸೆ.6: 'ಆಧುನಿಕ ಮೂಲಸೌಕರ್ಯಗಳ ಮೂಲಕ ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿಸುವ ನಿಮ್ಮ ವಚನವೆಲ್ಲಿ ಬಸವರಾಜ ಬೊಮ್ಮಾಯಿ ಅವರೇ?  ಎತ್ತ ನೋಡಿದರೂ ನೀರು, ಪ್ರವಾಹ. ಇದುವೇ ರಾಜ್ಯ ಬಿಜೆಪಿ ಸರಕಾರ ನಿರ್ಮಿಸಿದ ಹೆಮ್ಮೆಯ ಬೆಂಗಳೂರು? ಬೆಂಗಳೂರಿನ ಜನತೆ ಕೇಳುತ್ತಿದ್ದಾರೆ' ಎಂದು ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬೆಂಗಳೂರಿಗರ ಸುಸ್ಥಿರ ಆರೋಗ್ಯಕ್ಕೆ ಪ್ರತಿ ವಾರ್ಡ್‍ನಲ್ಲಿ ‘ಆಯುಷ್ಮಾನ್ ಕ್ಲಿನಿಕ್’ ಸ್ಥಾಪಿಸುವ ವಚನವಿತ್ತ ಬಸವರಾಜ ಬೊಮ್ಮಾಯಿ ಅವರೇ ಎಲ್ಲಿ ನಿಮ್ಮ ವಚನ. ನಿಮ್ಮ ರಾಜ್ಯ ಬಿಜೆಪಿ ಸರಕಾರದ ಫಲ ಅನಾರೋಗ್ಯಪೀಡಿತ  ಬೆಂಗಳೂರಿನ ನಾಗರಿಕರು ಇನ್ನೂ ಕಾಯುತ್ತಿದ್ದಾರೆ. ಇದಕ್ಕೆ ನಿಮ್ಮ ಹತ್ತಿರ ಇದೆಯಾ ಉತ್ತರ?  ಎಂದು ಪ್ರಶ್ನಿಸಿದ್ದಾರೆ.

ಟೊಮೆಟೊ, ಈರುಳ್ಳಿ, ಆಲೂಗಡ್ಡೆ ದರಗಳ ಅಸ್ವಾಭಾವಿಕ ಏರಿಳಿತ ಎದುರಿಸಲು ‘ಟಾಪ್ ಪ್ರೈಸ್ ಫಂಡ್’ ರಚಿಸುತ್ತೇವೆಂದ ಬಸವರಾಜ ಬೊಮ್ಮಾಯಿ ಅವರೇ ಎಲ್ಲಿ ನಿಮ್ಮ ವಚನ? ರಾಜ್ಯ ಬಿಜೆಪಿ ಸರಕಾರದಿಂದ ಗಗನಕ್ಕೆ ಏರಿರುವ ತರಕಾರಿ ಬೆಲೆಯಿಂದ ಹತಾಶರಾದ ಜನ ಸಾಮಾನ್ಯರು ನಿಮ್ಮನ್ನು ಕೇಳುತ್ತಿದ್ದಾರೆ. ನಿಮ್ಮ ಹತ್ತಿರ ಇದೆಯಾ ಉತ್ತರ? ಎಂದು ನಾಸೀರ್ ಹುಸೇನ್ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News