×
Ad

ಮಳೆ ಹಿನ್ನೆಲೆ: ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಲ್ಲಿ ಹಲವು ವಿಮಾನಗಳು ವಿಳಂಬ

Update: 2022-09-06 20:31 IST
Photo credit - PTI

ಬೆಂಗಳೂರು, ಸೆ.6: ಮಳೆ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನ ಸೇವೆಗಳಲ್ಲಿ ವಿಳಂಬವಾಗಿದೆ ಎಂದು ವರದಿಯಾಗಿದೆ.

6 ವಿಮಾನಗಳನ್ನು ಬೆಂಗಳೂರು ಬದಲಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ಎರಡು ಅಂತರ್‍ರಾಷ್ಟ್ರೀಯ ವಿಮಾನಗಳಾದ ಪ್ಯಾರಿಸ್‍ನಿಂದ ಆಗಮಿಸುವ ಏರ್ ಫ್ರಾನ್ಸ್ ಮತ್ತು ಫ್ರಾಂಕ್ಫರ್ಟ್‍ನಿಂದ ಲುಫ್ತಾನ್ಸ ವಿಮಾನವನ್ನು ಚೆನ್ನೈಗೆ ತಿರುಗಿಸಲಾಗಿದೆ.

ಅದೇ ರೀತಿ, ಹೊಸದಿಲ್ಲಿ, ಮುಂಬೈ ಮತ್ತು ಪುಣೆಯಿಂದ ಇಂಡಿಗೋ ಮತ್ತು ಗೋ ಫಸ್ಟ್ ನ ನಾಲ್ಕು ದೇಶೀಯ ವಿಮಾನಗಳ ಹಾದಿಯನ್ನೂ ಬದಲಿಸಲಾಗಿದೆ. ಆರು ಅಂತರ್‍ರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು ಒಂಬತ್ತು ವಿಮಾನಗಳು ವಿಳಂಬವಾಗಿವೆ ಎಂದು ಅವರು ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News