ಮಂಗಳೂರು: ಶಾಲೆಗೆ ನುಗ್ಗಿ ಗ್ಯಾಸ್ ಸಿಲಿಂಡರ್ ಸಹಿತ ಸೊತ್ತು ಕಳವು
Update: 2022-09-06 20:42 IST
ಮಂಗಳೂರು, ಸೆ.6: ನಗರದ ಬಂದರ್‌ನ ಉರ್ದು ಸರಕಾರಿ ಪ್ರೌಢಶಾಲೆಯ ಅಡುಗೆ ಕೋಣೆಗೆ ನುಗ್ಗಿದ ದುಷ್ಕರ್ಮಿಗಳು ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್ ಸಹಿತ 9000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಬಂದರ್ ಠಾಣೆಗೆ ದೂರು ನೀಡಲಾಗಿದೆ.
ಸೆ.3ರ ಸಂಜೆ 4.30ರಿಂದ ಸೆ.6ರ ಬೆಳಗ್ಗೆ 8.30ರ ಮಧ್ಯೆ ಈ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.