ಯುವ ಕಾಂಗ್ರೆಸ್‌ನಿಂದ ‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮ
ಮಂಗಳೂರು, ಸೆ.6: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಉಪ್ಪಿನಂಗಡಿ ಬ್ಲಾಕ್ ಸಮಿತಿಯ ವತಿಯಿಂದ ಪುಣಚ, ಪೆರುವಾಯಿ, ಇಡ್ಕಿದು, ಅಳಕೆಮಜಲು ಗ್ರಾಮಗಳಲ್ಲಿ ‘ಯೂತ್ ಜೋಡೊ ಬೂತ್ ಜೋಡೊ’ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಈ ಸಂದರ್ಭ ಭಾರತ್ ಜೋಡೊ ಯಾತ್ರೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ. ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಜಿಪಂ ಮಾಜಿ ಸದಸ್ಯ ಎಂ.ಎಸ್. ಮುಹಮ್ಮದ್, ಮುರುಳಿಧರ ರೈ, ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಗ್ರಾಪಂ ಉಪಾಧ್ಯಕ್ಷೆ ನೆಬಿಸಾ, ಗ್ರಾಪಂ ಸದಸ್ಯರಾದ ರಾಜೇಂದ್ರನಾಥ್ ರೈ, ರಶ್ಮಿ ಎಂ., ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಲ್ಫಿ ಡಿಸೋಜ, ವಲಯ ಅಧ್ಯಕ್ಷ ಪಂಚಾಪಾಲ ಶೆಟ್ಟಿ, ಬ್ಲಾಕ್ ಕಾರ್ಯದರ್ಶಿ ಸಿದ್ದೀಕ್ ಪೆರುವಾಯಿ, ಯೂತ್ ಅಧ್ಯಕ್ಷ ರಂಜಿತ್ ಮಾರ್ಲ ಆಳ್ವ, ಪ್ರವೀಣ್‌ಚಂದ್ರ ಆಳ್ವ, ಶ್ರೀಧರ್ ಶೆಟ್ಟಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಲತೀಫ್, ಬಾಲಕೃಷ್ಣ, ಪ್ರವೀಣ್ ಶೆಟ್ಟಿ, ಸೋಮಶೇಖರ್ ಶೆಟ್ಟಿ, ಕುಸುಮಲತಾ, ಸುಶಾಂತ್, ಮೋಹನ್ ಗುಜ್ಜಿನಡ್ಕ, ಎನ್‌ಎಸ್‌ಯುಐ ಮುಖಂಡರಾದ ಬಾತಿಶ್ ಅಳಕೆಮಜಲು, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಾಮಣ್ಣ ಪಿಲಿಂಜೆ, ಪ್ರಜ್ವಲ್, ಅಶ್ರಫ್ ಕೆಜಿಎನ್, ರಝಾಕ್ ಮತ್ತಿತರರು ಉಪಸ್ಥಿತರಿದ್ದರು.