ಬೆಂಗಳೂರು ವಿವಿ ಆವರಣದಲ್ಲಿ ದೇವಸ್ಥಾನ ನಿರ್ಮಿಸಿದರೆ ಬೃಹತ್ ಪ್ರತಿಭಟನೆ: ವಿದ್ಯಾರ್ಥಿಗಳ ಎಚ್ಚರಿಕೆ

Update: 2022-09-08 10:42 GMT
ಬೆಂಗಳೂರು ವಿವಿ - ಫೈಲ್ ಚಿತ್ರ 

ಬೆಂಗಳೂರು, ಸೆ.7: ಶೈಕ್ಷಣಿಕ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಕೇಂದ್ರಗಳನ್ನು ನಿರ್ಮಾಣ ಮಾಡಬಾರು ಎಂದು ನ್ಯಾಯಾಲಯವು ಆದೇಶಿಸಿದ್ದರೂ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ದೇವಸ್ಥಾನವನ್ನು ದೇವಸ್ಥಾನವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ನ್ಯಾಯಾಲಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬೆಂಗಳೂರು ವಿವಿ ಆವರಣದಲ್ಲಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಬುಧವಾರ ವಿವಿ ಆವರಣದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ದೇವಸ್ಥಾನ ಕಾಮಗಾರಿಯನ್ನು ನಿಲ್ಲಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದರು. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ದೇವಸ್ಥಾನವನ್ನು ಕಟ್ಟಲು ಮುಂದಾದರೆ, ಬೆಂಗಳೂರು ವಿವಿಯ ಎಲ್ಲ ವಿಭಾಗಗಳಿಗೆ ಬೀಗ ಜಡಿದು ಪ್ರತಿಭಟನೆಯನ್ನು ಮಾಡಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿ ಮುಖಂಡ ಮನೋಜ್ ಅಝಾದ್ ಮಾತನಾಡಿ, ‘ರಾಜ್ಯ ಸರಕಾರವೂ ವಿಶ್ವವಿದ್ಯಾಲಯದೊಂದಿಗೆ ಸಾಮರಸ್ಯವನ್ನು ಸಾಧಿಸಿ ಕಟ್ಟಡವನ್ನು ಕಟ್ಟಿ ಬೆಂಗಳೂರು ವಿವಿಯ ಕುಲಪತಿಗಳಿಗೆ ಹಾಗೂ ಬಿಬಿಎಂಪಿ ಆಯುಕ್ತರಿಗೆ ಪತ್ರವನ್ನು ಬರೆದಿದೆ.  ಆದರೆ ದೇವಸ್ಥಾನ ನಿರ್ಮಾಣ ಮಾಡಲು ವಿಶ್ವವಿದ್ಯಾಲಯದ ಈಗಿನ ಉಪಕುಲಪತಿಗಳ ಅನುಮತಿ ಪಡೆಯುವುದು ಬೇಡವೇ ಎಂದು ಪ್ರಶ್ನಿಸಿದರು.

‘ಈ ಹಿಂದಿನ ಉಪ ಕುಲಪತಿ ವೇಣುಗೋಪಾಲ್ ಅವರ ನಂತರ ಬಂದ ಉಪಕುಲಪತಿಗಳು ಈ ಕಾಮಗಾರಿಗೆ ತಡೆ ಒಡ್ಡಿದ್ದರು. ಆದರೂ ಈ ಹಿಂದಿನ ಉಪ ಕುಲಪತಿ ಆದೇಶ ನೀಡಿದ್ದಾರೆ ಎಂದು ಹೇಳಿ ಏಕಾಏಕಿ ಮುನ್ನುಗ್ಗುತ್ತಿದ್ದಾರೆ. ಹಾಗಾದರೆ, ವಿಶ್ವವಿದ್ಯಾಲಯದ ಉಪ ಕುಲಪತಿಯನ್ನು ಸರಕಾರ ಏಕೆ ನೇಮಿಸಬೇಕು, ಸಿಂಡಿಕೇಟ್ ಯಾಕೆ?’ ಅವರು ಪ್ರಶ್ನಿಸಿದ್ದಾರೆ.

‘ದೇವಸ್ಥಾನ ನಿರ್ಮಾಣ ಮಾಡಲು ವಿವಿ ವತಿಯಿಂದ ಯಾವುದೇ ರೀತಿಯ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬಹಿರಂಗವಾಗಿದೆ. ಆದರೆ ದೇವಸ್ಥಾನ ನಿರ್ಮಾಣಕ್ಕಾಗಿ ಹಣ ಎಲ್ಲಿಂದ ಬರುತ್ತಿದೆ ಎಂದು ಬಹಿರಂಗಪಡಿಸಬೇಕು. ಏಕೆಂದರೆ ವಿವಿಯ ಆವರಣವೂ ಸಾರ್ವಜನಿಕ ಆಸ್ತಿ ಆಗಿದ್ದು, ಶ್ರೀಮಂತರು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ದೇವಾಲಯವನ್ನು ನಿರ್ಮಾಣ ಮಾಡುತ್ತಿರಬಹುದು’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News