×
Ad

ಕೇರಳದಲ್ಲಿ ವಿದ್ಯುತ್ ಆಘಾತ; ಬಂಟ್ವಾಳದ ಯುವಕ ಮೃತ್ಯು

Update: 2022-09-07 21:33 IST

ಬಂಟ್ವಾಳ, ಸೆ. 7: ಕೆಲಸ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ಕೇರಳದ ಕಂಪೆನಿಯೊಂದರಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಮರ್ತಾಜೆ ನಿವಾಸಿ ವಿದ್ಯಾದರ ಕುಲಾಲ್ (35) ಮೃತರು ಎಂದು ತಿಳಿದುಬಂದಿದೆ. 

ನಿತ್ಯಾನಂದ ಅವರು ಕೇರಳದ ಖಾಸಗಿ ಎಲೆಕ್ಟ್ರಾನಿಕ್  ಕಂಪೆನಿಯೊಂದರಲ್ಲಿ  ಕೆಲಸ ಮಾಡುತ್ತಿದ್ದರು. ಸೆ.5ರಂದು  ಕರ್ತವ್ಯದಲ್ಲಿರುವಾಗ ವಿದ್ಯುತ್ ಹರಿದು ಅವರು ಮೃತಪಟ್ಟ ಘಟನೆ ನಡೆದಿದೆ.

ಮೂಲತ: ಬೆಳ್ಳಾರೆ ನಿವಾಸಿಯಾಗಿದ್ದ ಇವರು ಇತ್ತೀಚೆಗೆ ಸಜೀಪ ಮುನ್ನೂರು ಗ್ರಾಮದ ಮರ್ತಾಜೆ ಎಂಬಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟಿಕೊಂಡಿದ್ದರು. ಒಂದು ವರ್ಷದ ಹಿಂದೆ ಇವರಿಗೆ ವಿವಾಹವಾಗಿದ್ದು, ಪತ್ನಿ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಉದ್ಯೋಗದಲ್ಲಿದ್ದಾರೆ.

ಪತ್ನಿ ಗರ್ಭಿಣಿಯಾಗಿದ್ದು, ಬರುವ ತಿಂಗಳು ಸೀಮಂತ ಕಾರ್ಯಕ್ರಮ ನಡೆಯಬೇಕಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News