ಬೆಂಗಳೂರಿನಲ್ಲಿ ಪ್ರವಾಹ ಹಿನ್ನೆಲೆ; ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಗೆ ಹೋಟೆಲ್ ರೂಮ್‌ಗಳು ಲಭ್ಯ
Update: 2022-09-08 16:21 IST
ಬೆಂಗಳೂರು: ಎರಡು ದಿನಗಳಿಂದ ಸುರಿದ ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಜಲಾವೃತಗೊಂಡಿರುವ ಬಡಾವಣೆಗಳ ಜನರಿಗೆ ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಗೆ ಹೋಟೆಲ್ ರೂಮ್‌ಗಳನ್ನು ನೀಡಡುವುದಾಗಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ತಿಳಿಸಿದೆ.
'ನಗರದಲ್ಲಿ ಅತಿಯಾದ ಮಳೆಯಿಂದ ಬಹಳಷ್ಟು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಗತ್ಯವಿರುವವರಿಗೆ ತಾತ್ಕಾಲಿಕವಾಗಿ ಅಂದಾಜು ಶೇ 40–50ರಷ್ಟು ಕಡಿಮೆ ಬಾಡಿಗೆಗೆ ರೂಮ್‌ಗಳನ್ನು ವ್ಯವಸ್ಥೆ ಮಾಡಲಾಗುವುದು' ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9844494630ಗೆ ಸಂಪರ್ಕಿಸಿ