ಉಡುಪಿಯ ಸುಂಕದಕಟ್ಟೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಎಸ್‌ಬಿಐ ಎಟಿಎಂ ಉದ್ಘಾಟನೆ
Update: 2022-09-10 12:18 IST
ಉಡುಪಿ: ಉಡುಪಿಯ ಸುಂಕದಕಟ್ಟೆ ಶ್ರೀ ವಿನಾಯಕ ದೇವಸ್ಥಾನದ ಆವರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಅನ್ನು ಸೆ.7 ಬುಧವಾರದಂದು ಉದ್ಘಾಟಿಸಲಾಯಿತು.
ಎಸ್‌ಬಿಐ ಪ್ರಾದೇಶಿಕ ಪ್ರಧಾನ ಕಛೇರಿ ಬೆಂಗಳೂರಿನ ಜನರಲ್ ಮ್ಯಾನೇಜರ್ ನಂದಕಿಶೋರ್ ಎಟಿಎಂ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೆ.ಫಾ. ವಲೇರಿಯನ್ ಮೆಂಡೋನ್ಸ ಮತ್ತು ಜೈಂಟ್ಸ್ ಗ್ರೂಪ್ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.
ದೇವಸ್ಥಾನದ ಆವರಣದಲ್ಲಿ ಎಟಿಎಂ ಅಳವಡಿಕೆಯಿಂದ ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ ಮತ್ತು ಬಾಡಿಗೆ ಆದಾಯವು ದೇವಾಲಯದ ಆಡಳಿತಕ್ಕೂ ಸಹಾಯ ಮಾಡುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.